ವಿವಿ ಕಾಲೇಜು: ಇಂಗ್ಲಿಷ್‌ ಬೋಧಕರಿಗೆ ಒಂದು ದಿನದ ಕಾರ್ಯಾಗಾರ ಸಂಪನ್ನ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಆಂಗ್ಲಭಾಷಾ ವಿಭಾಗ ಮತ್ತು ಆಂಗ್ಲ ಶಿಕ್ಷಕರ ಸಂಘ ಮಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಪ್ರಥಮ ಸೆಮಿಸ್ಟರ್ ಯುಜಿ ಇಂಗ್ಲಿಷ್ ಪಠ್ಯಕ್ರಮ (ಎನ್‌ಇಪಿ) ಕುರಿತು ಬೋಧಕರಿಗೆ ಒಂದು ದಿನದ ಕಾರ್ಯಾಗಾರವನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.


ಮಂಗಳೂರು ವಿಶ್ವವಿದ್ಯಾನಿಲಯ ಇಂಗ್ಲಿಷ್‌ ಅಧ್ಯಯನ ಮಂಡಳಿ (ಬಿಒಎಸ್‌) ಅಧ್ಯಕ್ಷೆ ಪ್ರೊ.ಪರಿಣಿತಾ ಕಾರ್ಯಾಗಾರ ಉದ್ಘಾಟಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ, ಸಂವಹನ ಭಾಷೆಯಾಗಿ ಇಂಗ್ಲಿಷ್‌ನ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿದರು. ಡಾ.ಪದ್ಮಜಾ ಶೆಟ್ಟಿ, ಪ್ರೀತಾ ಭಂಡಾರಿ, ಅಲೋಕ್ ಬಿಜೈ, ಸಾಜನ್ ಜಾರ್ಜ್, ಭಾರತಿ, ಸೀಮಾ ಲೂಯಿಸ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.


ಇತ್ತೀಚೆಗೆ ನಿವೃತ್ತರಾದ ಎಸ್‌ಎಂಎಸ್ ಕಾಲೇಜಿನ ಟಿ ಪಿ ಬಾಬುರಾಜ್, ವಿವಿ ಕಾಲೇಜಿನ ಪಟ್ಟಾಭಿರಾಮ ಸೋಮಯಾಜಿ, ವಿವಿ ಕಾಲೇಜಿನ ಶಾಮ್ ಭಟ್ ಮತ್ತು ಬೆಸೆಂಟ್ ಕಾಲೇಜಿನ ಗಣಪತಿ ಭಟ್ ಅವರನ್ನು ಗೌರವಿಸಲಾಯಿತು. ಪಿಎಚ್ ಡಿ ಪದವಿ ಪಡೆದ ಡಾ.ಶ್ರೀನಿವಾಸ್, ಡಾ.ಪದ್ಮಜಾ ಶೆಟ್ಟಿ, ಡಾ.ವಾಣಿ ಅವರನ್ನು ಸನ್ಮಾನಿಸಲಾಯಿತು. ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ.ವಿಕ್ಟರ್ ವಾಜ್, ಉಪಾಧ್ಯಕ್ಷರಾಗಿ ಡಾ.ಪದ್ಮಜಾ ಶೆಟ್ಟಿ, ಕಾರ್ಯದರ್ಶಿಯಾಗಿ ಸೋಜನ್ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಶಾಂತಿ ರೋಚೆ ಆಯ್ಕೆಯಾದರು.


ವಿವಿ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ, ಕಾರ್ಯಕ್ರಮ ಸಂಯೋಜಕಿ ಡಾ.ರಾಜಲಕ್ಷ್ಮಿ ಎನ್ ಕೆ ಅತಿಥಿಗಳನ್ನು ಸ್ವಾಗತಿಸಿದರು. ರೇಖಾ ಬಿ ಪ್ರಾರ್ಥಿಸಿ, ಡಾ.ಶ್ರೀಜಾ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top