ಮೂಡುಬಿದಿರೆ: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಪದವಿ ಕಾಲೇಜಿನ ಪ್ರಾಶುಂಪಾಲ ಡಾ ಕುರಿಯನ್ ಕ್ರಿಯಾಶೀಲ ಮನೋಭಾವವು ವಿದ್ಯಾರ್ಥಿಗಳಲ್ಲಿ ಅಡಗಿರುವ ಸಮೃದ್ಧ ಜ್ಞಾನವನ್ನು ಅನವರಣಗೊಳಿಸುತ್ತದೆ. ಪಾಂಡಿತ್ಯದ ಸಂಪಾದನೆಯ ವಿದ್ಯಾರ್ಥಿಗಳ ಗುರಿಯಾಗಬೇಕು ಎಂದರು. ಜೀವವೈವಿಧ್ಯತೆ ಕುರಿತು ಜಾಗೃತಿ ಮೂಡಿಸುವಂತಹ ವಿವಿಧ ಚಟುವಟಿಕೆಗಳನ್ನು ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಬೇಕು ಎಂದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಯೋಜಕಿ ಡಾ ರಶ್ಮಿ.ಕೆ ಪ್ರಾಕೃತಿಕ ಅದ್ಬುತದ ಕುರಿತು ಮಾತನಾಡಿದರು.
ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಜಯದೇವ ಕೆ ಫೈಟೊರೆಮಿಡಿಯೇಶನ್ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು. ಮಣ್ಣು, ಗಾಳಿ ಹಾಗೂ ನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ಸ್ವಚ್ಛಗೊಳಿಸಲು ಈ ತಂತ್ರಜ್ಞಾನವನ್ನು ಬಳಸುತ್ತಾರೆ ಎಂದರು.
ಸ್ನಾತಕೋತ್ತರ ಜೀವಶಾಸ್ತ್ರ ವಿಭಾಗದ ಸಂಯೋಜಕ ಡಾ ಪಿ.ವಿ ಗೌಡ, ಸಹಾಯಕ ಪ್ರಾಧ್ಯಪಕ ಡಾ ರಾಜೇಶ್, ಡಾ ಕೇಶವಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅನುಷಾ ನಿರೂಪಿಸಿ, ಮಧುಶ್ರೀ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ