ವಿವಿ ಕಾಲೇಜು ಮಹಿಳಾ ತಂಡಕ್ಕೆ ಥ್ರೋಬಾಲ್ ನಲ್ಲಿ ಪ್ರಶಸ್ತಿ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಮಹಿಳಾ ತಂಡ, ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನ ಗಾಂಧಿ ಮೈದಾನದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ಕಾಲೇಜು ಥ್ರೋಬಾಲ್ ಪಂದ್ಯಾವಳಿಯನ್ನು ಗೆದ್ದುಕೊಂಡಿದೆ.


ಫೈನಲ್ ಪಂದ್ಯದಲ್ಲಿ ವಿವಿ ಕಾಲೇಜು ಮಂಗಳೂರು ತಂಡಕಕ್ಕೆ ಪದವು ಪ್ರಥಮ ದರ್ಜೆ ಕಾಲೇಜನ್ನು 2-0 ನೇರ ಸೆಟ್ಗಳಿಂದ ಸೋಲಿಸಿತು. ಮೊದಲ ಸೆಟ್ ಅನ್ನು 25-16 ರಿಂದ ಗೆದ್ದ ತಂಡ ಎರಡನೇ ಸೆಟ್ಟನ್ನೂ 25-14 ರಿಂದ ಸುಲಭವಾಗಿ ಗೆದ್ದುಕೊಂಡಿತು. ವಿವಿ ಕಾಲೇಜು ಮಂಗಳೂರಿನ ಮೋನಿಶಾ ಪಂದ್ಯಾವಳಿಯ ಅತ್ಯುತ್ತಮ ರಿಸೀವರ್ ಎಂದು ಗುರುತಿಸಿಕೊಂಡರೆ, ಹರ್ಷಿಕಾ ಅತ್ಯುತ್ತಮ ಥ್ರೋವರ್ ಗೌರವ ಪಡೆದುಕೊಂಡರು.


ಕಾರ್ಕಳದ ಎಸ್.ಬಿ.ಸಿ ಮೂರನೇ ಸ್ಥಾನ ಪಡೆದುಕೊಂಡರೆ, ಮಂಗಳೂರಿನ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ನಾಲ್ಕನೇ ಸ್ಥಾನ ಪಡೆದುಕೊಂಡಿತು. ವಿವಿಧ ಕಾಲೇಜುಗಳ ಒಟ್ಟು 14 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top