ಹೆಣ್ಣು ಜನ್ಮ ನೀಡಿದ ನಂತರ ಅವಳ ಆದ್ಯತೆಗಳು ಬದಲಾಗುತ್ತದೆ ಅವಳ ಜೀವನದ ವಿವಿಧ ಹಂತಗಳಲ್ಲಿ ವಿಭಿನ್ನ ಸಮಸ್ಯೆಗಳಿಗೆ ಆದ್ಯತೆಯನ್ನು ಪಡೆಯುತ್ತದೆ. ನವಜಾತ ಶಿಶುವಿನೊಂದಿಗೆ ಒಂದು ಸುಂದರವಾದ ಜೀವನವನ್ನು ಪ್ರಾರಂಭಿಸುತ್ತಾಳೆ. ಮಹಿಳೆಯ ಹದಿಹರೆಯದ ಜೀವನವು ನವಜಾತ ಶಿಶುವಿನೊಂದಿಗಿನ ಜೀವನದಿಂದ ಬಹುದೂರವಾಗಬಲ್ಲದು, ಸಂಶೋಧನೆಯ ಪ್ರಕಾರ ತಾಯಿ ಮಕ್ಕಳನ್ನು ಹೊಂದುವ ಮೊದಲು ಇದ್ದಂತೆ ಇರುವುದಿಲ್ಲ ಎಂದು ಹೇಳುತ್ತದೆ. ಬಹುತೇಕ ಎಲ್ಲ ಹೆಣ್ಣು ಸಸ್ತನಿಗಳು ಗರ್ಭಾವಸ್ಥೆಯಲ್ಲಿ ಮತ್ತು ಜನನದ ನಂತರ ಮೂಲಭೂತ ಬದಲಾವಣೆಗಳಾಗುತ್ತವೆ ಮತ್ತು ಗರ್ಭಾವಸ್ಥೆ ಮತ್ತು ಹಾಲೂಡಿಸುವ ಹಾರ್ಮೋನುಗಳು ರಚನಾತ್ಮಕ ಬದಲಾವಣೆಗಳನ್ನು ಉಂಟುಮಾಡಬಹುದು. ನಮ್ಮ ಸ್ಮರಣೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಮೊದಲಿಗೆ, ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ ಮತ್ತು ನಂತರ ತನ್ನ ನೋವು ಮತ್ತು ದೈಹಿಕ ನೋವುಗಳನ್ನು ಮರೆತು ಮಗುವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾಳೆ.
ಹೆಣ್ಣು ತಾಯಿಯಾದಾಗ ಅವಳಲ್ಲಿನ ಆಸೆಗಳು ಬತ್ತಿ ಹೋಗುತ್ತವೆ ಎಂದು ಅನಿಸುತ್ತೆ. ಮಗು ಜನಿಸಿದಾಗ ಒಂದು ಹೆಣ್ಣು ತಾಯಿಯಾಗಿ ತನಗೆ ತಾನೆ ಜನ್ಮ ನೀಡಿಕೊಳ್ಳುತ್ತಾಳೆ. ತಾಯಿಯ ನಿಸ್ವಾರ್ಥದ ಸಂವೇದನೆ ಅವಳ ಅಂತಃಕರಣವನ್ನು ಆವರಿಸುತ್ತವೆ.
ತಾಯಿ ತನ್ನ ಮಡಿಲಿಗೆ ಸೇರಿದ ಕಂದಮ್ಮನ ಪೋಷಣೆಗಾಗಿ ತನ್ನೆಲ್ಲಾ ಸುಖವನ್ನು ಮರೆತು ನಿದ್ರೆ ಆಹಾರವನ್ನು ತೊರೆದು ಹಗಲು-ರಾತ್ರಿಯೆನ್ನದೆ ಕಂದನ ಲಾಲನೆ ಪಾಲನೆಯಲ್ಲಿ ಸುಖವನ್ನು ಕಾಣುತ್ತಾಳೆ.
ಯಾವ ಮಹಿಳೆ ಮಗುವಿನ ಜನ್ಮದ ಪೂರ್ವ ದೊಡ್ಡ ಅಲಾರಾಂ ಶಬ್ದಕ್ಕೂ ಏಳದವಳು ಮಗುವಿನ ಒಂದು ಸಣ್ಣ ಹೂಂ ಗುಟಿಗೆ ಎದ್ದು ಕುಳಿತು ಕೊಳ್ಳುತ್ತಾಳೆ. ಯಾವ ಮಹಿಳೆ ಛೀ ಗಲೀಜು ಎಂದು ಅಸಹ್ಯ ಪಡುತ್ತಿದ್ದವಳು ತಾಯ್ತನ ಹೊಂದಿದಾಗ ತನ್ನ ಕೈಯಾರೆ ಮಗುವನ್ನು ಶುಚಿಗೊಳಿಸುತ್ತಾಳೆ.
ಯಾವ ಮಹಿಳೆ ನನಗೆ ಅದು ತಿನ್ನಬೇಕು ಇದು ತಿನ್ನಬೇಕು ಎಂದು ಆಸೆಯಿಂದ ಗಂಟೆ ಪೂರ್ತಿ ಆಹಾರದ ಬಗ್ಗೆ ಯೋಚಿಸುತಿದ್ದವಳು ಮಗುವಾದ ನಂತರ ತನ್ನೆಲ್ಲಾ ಆಸೆಯನ್ನು ತೊರೆದು ಬರೀ ಎರಡು ನಿಮಿಷದಲ್ಲಿ ತನ್ನ ಹಸಿವನ್ನು ನೀಗಿಸುತ್ತಾಳೆ.
ಹೆತ್ತ ತಾಯಿ ಅತ್ಯಂತ ಸೂಕ್ಷ್ಮತೆಯನ್ನು ತನ್ನಲ್ಲಿ ತಾನು ಮೈಗೂಡಿಸಿಕೊಳ್ಳುತ್ತಾಳೆ. ಅವಳ ಕಂದನ ಪ್ರತಿಯೊಂದು ಸೂಕ್ಷ್ಮತೆಯನ್ನು ಕಂಡುಕೊಳ್ಳುತ್ತಾಳೆ. ಅವಳ ಮನಸು ಜಾಗೃತಗೊಳ್ಳುತ್ತದೆ.
ಯಾವ ಹೆಣ್ಣು ದಿನಪೂರ್ತಿ ಮನೆಯಲ್ಲಿ ಶಬ್ದ ಮಾಡುತ್ತಾಳೊ ಅವಳು ಜನ್ಮವಿತ್ತ ನಂತರ ಮನೆಯನ್ನು ಶಾಂತವಾಗಿರಲು, ಸ್ವಚ್ಛವಾಗಿಡಲು ಪ್ರಯತ್ನಿಸುತ್ತಾಳೆ. ಅವಳಿಗೆ ಅವಳ ಮಗುವಿನ ನಿದ್ದೆ ಮುಖ್ಯವಾಗಿರುತ್ತದೆ.
ತಾಯಂದಿರನ್ನು ವಿರಾಮವಿಲ್ಲದೆ ಕಾರ್ಯನಿರ್ವಹಿಸುವ, ತಮ್ಮ ಕುಟುಂಬಕ್ಕಾಗಿ ತಮ್ಮ ಪ್ರತಿಯೊಂದು ಅಗತ್ಯವನ್ನು ತ್ಯಾಗ ಮಾಡಬಲ್ಲ ಸೂಪರ್ ವುಮೆನ್ ಎಂದು ಶ್ಲಾಘಿಸಲಾಗುತ್ತದೆ ಮತ್ತು ಪ್ರತಿಯೊಂದು ಸಮಸ್ಯೆ ಅಥವಾ ಸವಾಲನ್ನು ಯಾವುದೇ ಅಡೆತಡೆಯಿಲ್ಲದೆ ಪರಿಹರಿಸಬಹುದು. ನೋಡಿ, ಒಬ್ಬ ತಾಯಿಯಾಗಿ, ನೀವು ಒಂದೇ ಸಮಯದಲ್ಲಿ ಹತ್ತು ವಿಷಯಗಳನ್ನು ನಿರ್ವಹಿಸುತ್ತೀರಿ ಅಥವಾ ನಿಮ್ಮ ಮಗುವಿನ ಆಗು ಹೋಗುಗಳನ್ನು ಗಮನಿಸುತ್ತಾ ಇರ್ತೀರಿ ಅಥವಾ ನಿಮ್ಮ ವೃತ್ತಿ ಮತ್ತು ಮನೆಯವರನ್ನು ಕುಶಲತೆಯಿಂದ ನಿರ್ವಹಿಸುತ್ತೀರಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಮರ್ಥ್ಯವುಳ್ಳವರು ಎಂದು ನೀವು ಕಂಡುಕೊಳ್ಳುವಿರಿ.
ಶ್ರೀಮತಿ ಅನ್ನಪೂರ್ಣಿಕ ಪ್ರಭು
ಉಪನ್ಯಾಸಕರು,
ರಸಾಯನ ಶಾಸ್ತ್ರ ವಿಭಾಗ,
ವಿವೇಕಾನಂದ ಕಾಲೇಜು,
ನೆಹರುನಗರ, ಪುತ್ತೂರು. ದ. ಕ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ