ಚೊಕ್ಕಾಡಿಯ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Upayuktha
0

ಭಾರತದ ಯುವಸಮೂಹ ಜಾಗೃತವಾಗಿರಬೇಕಾದ್ದು ಅಗತ್ಯ: ಸುಬ್ರಹ್ಮಣ್ಯ ನಟ್ಟೋಜ


ಪುತ್ತೂರು: ಭಾರತವನ್ನು ಹಾಳುಗೆಡಹುವುದಕ್ಕೆ ಪಾಕಿಸ್ಥಾನದಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಹಾಗಾಗಿಯೇ ಇಲ್ಲಿನ ಯುವಸಮೂಹವನ್ನು ಗುರಿಯಾಗಿರಿಸಿಕೊಂಡು ಗಾಂಜಾ, ಹೆರಾಯಿನ್‌ಗಳು ಭಾರತದ ಗಡಿಯಿಂದ ಒಳನುಸುಳುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳುವ ಮತ್ತು ದೇಶವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ಇದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ಸುಳ್ಯ ಸಮೀಪದ ಚೊಕ್ಕಾಡಿಯ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ 'ರಾಷ್ಟ್ರಜಾಗೃತಿಯಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ' ಎಂಬ ವಿಷಯದ ಬಗೆಗೆ ಸೋಮವಾರ ಮಾತನಾಡಿದರು.


ಬ್ರದರ್ಸ್ ಅಂಡ್ ಸಿಸ್ಟರ್ಸ್ ಅನ್ನುವ ಪದ ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ಬಳಸುವ ಮೊದಲೂ ಅಸ್ತಿತ್ವದಲ್ಲಿತ್ತು. ಆದರೆ ವಿವೇಕಾನಂದರು ಬಳಸಿದ ಧ್ವನಿ, ಬಳಸಿದ ಸಂದರ್ಭ ಹಾಗೂ ಭಾವನೆ ಎಲ್ಲರನ್ನೂ ಚಕಿತಗೊಳಿಸಿತು. ಇದು ಕೇವಲ ವಿವೇಕಾನಂದರದಷ್ಟೇ ಅಲ್ಲ, ಭಾರತದ ಹೆಚ್ಚುಗಾರಿಕೆ. ಇಂತಹ ಭಾವಪೂರ್ಣ, ಧ್ವನಿಯುಕ್ತ ಮಾತುಗಳ ಹಿಂದೆ ಈ ಮಣ್ಣಿನ ಸಂಸ್ಕಾರ ಅಡಗಿದೆ. ಹಾಗಾಗಿ ಭಾರತದ ಹಿರಿಮೆಯನ್ನು ಯುವಸಮೂಹ ಅರ್ಥ ಮಾಡಿಕೊಂಡು ಹೆಮ್ಮೆಯಿಂದ ಬಾಳಬೇಕು ಎಂದು ಹೇಳಿದರು.


ಅಮೇರಿಕಾ, ಇಂಗ್ಲೆಂಡ್ ಹೀಗೆ ಯಾವ ರಾಷ್ಟçಗಳನ್ನು ನೋಡಿದರೂ ಒಂದೇ ತೆರನಾದ ಜೀವನಕ್ರಮ ಕಾಣುತ್ತೇವೆ. ಆದರೆ ಭಾರತ ಹಾಗಲ್ಲ. ವೈವಿಧ್ಯಮಯ ವಿಷಯ – ವಿಚಾರಗಳಿಂದ ಸಮೃದ್ಧವಾದ ದೇಶ ನಮ್ಮದು. ಇಲ್ಲಿನ ಸಂಸ್ಕೃತಿ ವಿದೇಶೀಯರನ್ನು ಸದಾ ಬೆರಗಾಗುವಂತೆ ಮಾಡುತ್ತದೆ. ಆದಾಗ್ಯೂ ಇದು ಹಾವಾಡಿಗರ ದೇಶ ಎಂಬ ಅಪಪ್ರಚಾರ ಚಾಲ್ತಿಯಲ್ಲಿತ್ತು. ಆದರೆ ನಮ್ಮ ದೇಶ ಉತ್ಕೃಷ್ಟ ಹಾಗೂ ಸಮೃದ್ಧ ದೇಶ ಎಂಬುದ್ನು ಜಗತ್ತಿಗೆ ಸಾರುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದರಲ್ಲದೆ ನಾವು ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಹೀಗೆ ಏನು ಬೇಕಾದರೂ ಆಗಬಹುದು, ಆದರೆ ನಮ್ಮ ಸೇವೆ ಈ ದೇಶಕ್ಕೇ ಮೀಸಲು ಎಂಬ ಸಂಕಲ್ಪವನ್ನು ಮಾಡಬೇಕು ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ. ಉಪಸ್ಥಿತರಿದ್ದರು.


ಸತ್ಯಸಾಯಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಗುಣಶೇಖರ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top