ಬಿಎಸ್‌ವೈ ನಿವಾಸಕ್ಕೆ ಪೇಜಾವರ ಶ್ರೀಗಳ ಭೇಟಿ

Upayuktha
0

ಬೆಂಗಳೂರು: ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದರು.‌  


ಬಿಎಸ್ ವೈ ಮತ್ತು ಮನೆಮಂದಿ ಶ್ರೀಗಳವರನ್ನು ಭಕ್ತಿ ಆದರದಿಂದ ಬರಮಾಡಿಕೊಂಡು ಫಲಪುಷ್ಪ ಸಮರ್ಪಿಸಿ ಸತ್ಕರಿಸಿದರು. ನಿನ್ನೆ ಭಾನುವಾರ ಯಡಿಯೂರಪ್ಪನವರ ಜನ್ಮದಿನ ಇದ್ದ ಹಿನ್ನೆಲೆಯಲ್ಲಿ ಶ್ರೀಗಳವರು ಅವರಿಗೆ ಶಾಲು, ಶ್ರೀ ಕೃಷ್ಣನ ಮೂಲಗಂಧ ಪ್ರಸಾದ ಸಹಿತ ಆಶೀರ್ವದಿಸಿ ನಾಡಿಗೆ ಇನ್ನೂ ಬಹುಕಾಲ ಅವರ ಸೇವೆ ದೊರೆಯುವಂತೆ ದೇವರು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು. ಬಿಎಸ್ವೈ ಪುತ್ರ ವಿಜಯೇಂದ್ರ ಹಾಗೂ ಪುತ್ರಿಯರು ಮೊಮ್ಮಕ್ಕಳು ಉಪಸ್ಥಿತರಿದ್ದು ಶ್ರೀಗಳವರಿಂದ ಆಶೀರ್ವಾದ ಪಡೆದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top