|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಟಾಕಿ ಮಾತಿನ ಯುವ ನಿರ್ದೇಶಕ ಹಾಗೂ ನಟ ರಕ್ಷಿತ್ ಬೆಳ್ಮಣ್

ಪಟಾಕಿ ಮಾತಿನ ಯುವ ನಿರ್ದೇಶಕ ಹಾಗೂ ನಟ ರಕ್ಷಿತ್ ಬೆಳ್ಮಣ್



ಕಣ್ಣಿಗೆ ಕಾಣುವ ಕನಸು ಹಲವಾರು ಕನಸಿನ ಹುಚ್ಚಿನಲ್ಲಿ ಸಾಧನೆಯ ಮೆಟ್ಟಿಲು ಏರಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ತಾನು ಕಷ್ಟ ಪಟ್ಟಾಗ ತನಗೆ ಯಾರೂ ಸಹಾಯ ಮಾಡುವುದಿಲ್ಲ ಎಂದು ದುಃಖದಲ್ಲಿ ಕುಳಿತಾಗ ಬೇರೆ ಯಾವುದಾದರು ದಾರಿ ಸಿಗುತ್ತದೆ. ಆಗ ಆಗುವ ಸಂತೋಷ ಬೇರೊಂದಿಲ್ಲ. ಹೀಗೆ ಕನಸು ಹಲವಾರು ಸಾಧನೆ ಮಾಡಬೇಕು ಸಿನೆಮಾ ಕ್ಷೇತ್ರದಲ್ಲಿ ತೊದಗಿಸಿಕೊಳ್ಳಬೇಕು. ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದು ಕನಸಿತ್ತವರು ರಕ್ಷಿತ್ ಬೆಳ್ಮಣ್.


ಇವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಸಾಂತೂರು ಗ್ರಾಮದ ಹೊಸಮನೆ ಅಶೋಕ್ ಅಮೀನ್ ಹಾಗೂ ಯಶವಂತಿ ದಂಪತಿಗಳ ಪುತ್ರ. ನಾವು ಯಾವುದೇ ಕೆಲಸ ಮಾಡಬೇಕೆಂದರೆ ತಾಳ್ಮೆ ಬೇಕು. ತಾಳ್ಮೆ ಇದ್ದರೆ ಪ್ರತಿಯೊಂದು ಕೆಲಸ ಮಾಡಲು ಸಾಧ್ಯ. ತನ್ನಿಂದ ಆಗದು ಎಂದು ಕೊಂಡರೆ ಯಾವುದೇ ಕೆಲಸ ಆಗದು. ಅದೇ ತಾಳ್ಮೆಯಿಂದ ಕೆಲಸ ಮಾಡಿದರೆ ನಮ್ಮ ಕೆಲಸಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಇವರು ತನ್ನಿಂದ ಸಾಧ್ಯವಿದೆ ಎಂದು ಸಿನೆಮಾ ಲೋಕಕ್ಕೆ ಹೆಜ್ಜೆ ಇಟ್ಟರು. ಯುವ ಕಲಾವಿದ ಆದ ಕಾರಣ ಪ್ರಯತ್ನ ಮಾಡುತ್ತಿದ್ದಾರೆ. ತನ್ನನ್ನು ಕನಸನ್ನು ನನಸಾಗಿಸಬೇಕೆಂದು ಹೊರಟ ಪ್ರತಿಭೆ ನಟ, ನಿರ್ದೇಶಕ ಹಾಗೂ ಚಿತ್ರಕಥೆಗಾರರೂ ಹೌದು.


'ಇಯೇ ಎನ್ನ ಉಡಲ್' ಎಂಬ ತುಳು ಆಲ್ಬಮ್ ಸಾಂಗ್ ನಲ್ಲಿ ಹೀರೋ ಆಗಿ ನಟನೆ ಮಾಡಿದ್ದಾರೆ. ಹಾಗೂ ಚಿತ್ರಕಥೆಗಳನ್ನು ಬರಿಯುತ್ತಾರೆ. ಹಾಗೇ ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡುತ್ತಾರೆ. 'ಕಾರಂಟೈನ್ ' ಎಂಬ ತುಳು ಕಿರುಚಿತ್ರದಲ್ಲಿ ನಿರ್ದೇಶನ ಹಾಗೂ ಚಿತ್ರ ಕಥೆ ಮಾಡಿದ್ದಾರೆ. ಈಗ ಮುಂದಿನ ಹಂತದಲ್ಲಿ ಕಿರು ಚಿತ್ರ ಬಿಡುಗಡೆಯಾಗಲಿದ್ದು, ಕಥೆ ನಿರ್ದೇಶನ ಎಲ್ಲಾ ಇವರೇ ಮಾಡಿದ 'ಗೀತಾಂಜಲಿ' ಕಿರು ಚಿತ್ರ ಬಿಡುಗಡೆ ಹಂತದಲ್ಲಿದೆ. ಮುಂದೆ ಇನ್ನೂ 2 ಆಲ್ಬಮ್ ಸಾಂಗ್ ಗಳ ತಯಾರಿಯಲ್ಲಿದೆ. 


ಸಿನೆಮಾ ಕ್ಷೇತ್ರದ ಜೊತೆಗೆ ತನ್ನ ಊರಿನಲ್ಲಿ ಸ್ವಂತ ಮೊಬೈಲ್ ಶಾಪ್ ಇದೆ. ಮತ್ತು ಜೆಸಿಐ ಎಂಬ ಸಂಸ್ಥೆಯಲ್ಲೂ ಇದ್ದಾರೆ. ಅಲ್ಲದೇ ರೆಕಾರ್ಡಿಂಗ್ ಸ್ಟುಡಿಯೋ ಮಾಡಬೇಕು ಎನ್ನುವ ಆಲೋಚನೆಯಲ್ಲಿ ತಯಾರಿಗಳು ಆಗುತ್ತಿದೆ. ಸಿನೆಮಾ ಕ್ಷೇತ್ರದಲ್ಲಿ ಒಂದು ಹೆಸರು ಮಾಡಬೇಕು ಎನ್ನುವ ಇವರ ದೊಡ್ಡ ಕನಸು. ಇವರ ಕನಸು ನನಸಾಗಲಿ ಎಂದು ಹಾರೈಸೋಣ.

-ರಸಿಕಾ ಮುರುಳ್ಯ,

ತೃತೀಯ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜು ಪುತ್ತೂರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم