||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು: 'ಯೂನಿಯನ್ ಸಮೃದ್ಧಿ ಕೇಂದ್ರ' ತೆರೆದ ಯೂನಿಯನ್ ಬ್ಯಾಂಕ್

ಪುತ್ತೂರು: 'ಯೂನಿಯನ್ ಸಮೃದ್ಧಿ ಕೇಂದ್ರ' ತೆರೆದ ಯೂನಿಯನ್ ಬ್ಯಾಂಕ್


ಪುತ್ತೂರು: ಯೂನಿಯನ್‌ ಬ್ಯಾಂಕ್ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರ ಸಾಲ ಮಂಜೂರಾತಿಗಾಗಿ "ಯೂನಿಯನ್ ಸಮೃದ್ಧಿ ಕೇಂದ್ರ"ವನ್ನು ತೆರೆಯಲಾಗಿದೆ ಎಂದು ಯೂನಿಯನ್ ಬ್ಯಾಂಕ್ ಮಂಗಳೂರು ಮಹಾವಲಯದ ಜನರಲ್ ಮ್ಯಾನೇಜರ್ ರವೀಂದ್ರ ಬಾಬು ಹೇಳಿದ್ದಾರೆ.

 

ಯೂನಿಯನ್ ಬ್ಯಾಂಕ್‌ ಪುತ್ತೂರು ಇದರ ಆಶ್ರಯದಲ್ಲಿ "ಯೂನಿಯನ್ ಸಮೃದ್ಧಿ ಕೇಂದ್ರ"ವನ್ನು ಬೊಳುವಾರು ಬ್ಯಾಂಕಿನ ಶಾಖೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸಮೃದ್ಧಿ ಕೇಂದ್ರದ ಸದುಪಯೋಗವನ್ನು ಎಲ್ಲಾ ಗ್ರಾಹಕರು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.


ಮಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯಸ್ಥರು ಹಾಗೂ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿರುವ ಮಹೇಶ ಜೆ ಇವರು ಮಾತನಾಡಿ, ಸಮೃದ್ಧಿ ಕೇಂದ್ರದ ಮಹತ್ವವನ್ನು ವಿವರಿಸಿದರಲ್ಲದೆ, ಕೃಷಿ ಹಾಗೂ ಇನ್ನಿತರ ಸಾಲಗಳನ್ನು ಶೀಘ್ರ ಮಂಜೂರುಗೊಳಿಸುವ ಆಶ್ವಾಸನೆ ನೀಡಿದರು.


ಪುತ್ತೂರು ವಲಯದ ಕೃಷಿಕರು, ಉದ್ಯಮಿಗಳು, ಶಾಖಾ ಪ್ರಬಂಧಕರು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೆಳ್ಳಾರೆಯ ಪ್ರಗತಿಪರ ಕೃಷಿಕರಾದ ತಿರುಮಲೇಶ್ವರ ಭಟ್ ಕುರಿಯಾಜೆಯವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಪುತ್ತೂರು ಬೊಳ್ವಾರ್ ಶಾಖಾ ಪ್ರಬಂಧಕರಾದ ಸ್ಮಿತೇಶ್ ಸ್ವಾಗತಿಸಿ, ಪುತ್ತೂರು ಶಾಖಾ ಪ್ರಬಂಧಕರಾದ ನಾಗರಾಜು ವಂದಿಸಿದರು. ಪುತ್ತೂರು ಬೊಳ್ವಾರ್ ಶಾಖೆಯ ಸಹಾಯಕ ವ್ಯವಸ್ಥಾಪಕಿ ಕು.ಉಮಾ ಕಾರ್ಯಕ್ರಮ ನಿರೂಪಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter


0 Comments

Post a Comment

Post a Comment (0)

Previous Post Next Post