ಸೋತು ಗೆಲ್ಲುವುದಕ್ಕೆ ಇವರೇ ಸಾಕ್ಷಿ; ರಣವೀರ್ ಅರೋರಾ ಅಲಹಾಬಾದಿಯ

Upayuktha
0

ಒಬ್ಬ ಮಗುವಿನಲ್ಲಿ ನೀನು ಮುಂದೆ ಏನು ಆಗುತ್ತೀಯ ಎಂದು ಕೇಳಿದಾಗ, ಆ ಮಗು ಡಾಕ್ಟರ್, ಪೊಲೀಸ್, ಡ್ರೈವರ್, ಟೀಚರ್ ಎಂದು ಹಲವಾರು ಹೆಸರುಗಳನ್ನೂ ಹೇಳಿ, ಮುದ್ದಾದ  ಕಾರಣಗಳನ್ನು ನೀಡುತ್ತದೆ. ದಿನ ಕಳೆದಂತೆ ಉತ್ತರಗಳು ಬದಲಾಗುತ್ತಾ ಹೋಗುತ್ತವೆ. ಒಂದು ದಿನ ಡಾಕ್ಟರ್ ಆದರೆ ಮತ್ತೊಂದು ದಿನ ಡ್ರೈವರ್ ಆಗುವ ಹಂಬಲ. ಇದಕ್ಕೆ ಇರಬಹುದು, ಕನಸುಗಳಿಗೆ ಮಿತಿಯಿಲ್ಲ ಎಂದು ಹಿರಿಯರು ನುಡಿದಿದ್ದು. ಇಂತಹ ಕನಸುಗಳನ್ನು ನನಸಾಗಿಸಲಾ ಅದೆಷ್ಟೂ ಕಷ್ಟ ಪಡುತ್ತೇವೆ. ಈ ಹಾದಿಯಲ್ಲಿ ಸೋಲು, ಗೆಲುವು ಎರಡೂ ಸಹಜ. ಸೋತಾಗ ಕನಸು ಆರಬಾರದು, ಗೆದ್ದಾಗ ಅಸಡ್ಡೆ ಹುಟ್ಟಬಾರದು. ಸೋಲನ್ನು ಎದುರಿಸಿ ಜಯದ ಕಡೆಗೆ ಮುನ್ನುಗ್ಗುವವನೇ ನಿಜವಾದ ಶ್ರಮಿ. ಇಂತಹವರಲ್ಲಿ ಒಬ್ಬರು, ರಣವೀರ್ ಅಲಹಾಬಾದಿಯ.

 


ರಣವೀರ್  ಅರೋರಾ ಅಲಹಾಬಾದಿಯ ಹುಟ್ಟಿದ್ದು, ಬೆಳೆದಿದ್ದು ಮುಂಬೈನಲ್ಲಿ. ತಂದೆ, ತಾಯಿ; ಗೌತಮ್ ಅಲಹಾಬಾದಿಯ ಹಾಗೂ ಸ್ವಾತಿ ಅಲಹಾಬಾದಿಯ ಇಬ್ಬರೂ ವೈದ್ಯರು. ಚಿಕ್ಕ ವಯಸ್ಸಿನಿಂದಲೇ ರಣವೀರ್ ಚುರುಕು. ಶಾಲೆ, ಪದವಿ ಪೂರ್ವ ತರಗತಿಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದ್ದ ರಣವೀರ್ ಅವರಿಗೆ ತಮ್ಮ ತಂದೆ- ತಾಯಿ ನಡೆದ ಹಾದಿಯಲ್ಲಿ ಹೋಗುವುದಕ್ಕೆ ಆಸಕ್ತಿ ಇರಲಿಲ್ಲ. ಹಾಗಾಗಿ, ಇಂಜಿನಿಯರಿಂಗ್ ಆಯ್ದುಕೊಂಡರು. ವಯಸ್ಸಿನ ಆಟವೋ, ನಾನು ಓದುವುದರಲ್ಲಿ ಚುರುಕು ಎಂಬ ಅಸಡ್ಡೆಯೂ ಗೊತ್ತಿಲ್ಲ. ಮನಸ್ಸು ತಪ್ಪು ದಾರಿಯತ್ತ ತಿರುಗಿತು. ಎಲ್ಲ ದುಶ್ಚಟಗಳು ಪ್ರಾರಂಭವಾದವು. ಇದೆ ಸಮಕ್ಕೆ ಪ್ರೀತಿ- ಪ್ರೇಮ ಎಂಬ ಆಟವೂ ಶುರುವಾಯಿತು. ಪ್ರೀತಿ ಕೈಕೊಟ್ಟಿತು, ಮದ್ಯಪಾನ ಆಪ್ತವಾಯಿತು. ಗುಂಡಾಗಿದ್ದ ರಣವೀರ್ ದೇಹ, ಒಡೆದ ಮನಸ್ಸು, ಎಲ್ಲದರ ಪರಿಣಾಮ ಪರೀಕ್ಷೆಯಲ್ಲಿ ಕಾಣಿಸಿತು. ಎಂದೂ ಸೋಲು ಕಾಣದ ರಣವೀರ್ಗೆ  ಪರೀಕ್ಷೆಯಲ್ಲಿ ಫೇಲ್ ಆದಾಗ ತಮ್ಮ ತಪ್ಪಿನ ಅರಿವಾಯಿತು. ತಂದೆ ತಾಯಿಗೆ ಮಗನ ಮೇಲಿನ ಚಿಂತೆ  ಹೆಚ್ಚಾಗಿತ್ತು. ಅದೇನು ಮಾಯವೋ, ಅದ್ಯಾವ ಪವಾಡವೋ, ರಣವೀರ್, ತಕ್ಷಣ ಹೋಗಿ ಕೈ ಮೇಲೆ ಫೀನಿಕ್ಸ್ ಹಕ್ಕಿಯ ಹಚ್ಛೆ ಹಾಕಿಸಿಕೊಂಡರು. ನಾನು ಫೀನಿಕ್ಸ್ ಹಕ್ಕಿಯಂತೆ ಸೋತಾಗೆಲ್ಲ ಪುನಃ ಎದ್ದು ನಿಲ್ಲಬೇಕು ಎಂದರು.  

  

ತಮ್ಮ ದೇಹದ ತೂಕ ಇಳಿಸಲು ಹಾಗು ಎಲ್ಲ ದುಶ್ಚಟಗಳನ್ನು ಬಿಡಲು ಒಂದು ದಾರಿ ಕಾಣಿಸಿದ್ದು, ಜಿಮ್. ಇಲ್ಲಿ ಪ್ರತೀದಿನ ವ್ಯಾಯಾಮ ಮತ್ತಿತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರಿಂದ, ವಿದ್ಯಾಭ್ಯಾಸದಲ್ಲಿಯೂ ಚೇತರಿಕೆ ಕಂಡು ಬಂದಿತು. ಇಂಜಿನೀರಿಂಗ್ ಮುಗಿಸಿದ ನಂತರ, ನನ್ನ ಹಾಗೆ ಮತ್ತಿತರು ಆಗಬಾರದು, ಜನರಿಗೆ ಸಹಾಯವಾಗುವಂತೆ ಮಾಹಿತಿಗಳನ್ನು ನೀಡಬೇಕು ಎಂಬ ಉದ್ದೇಶದಿಂದ, ಇವರು ತಮ್ಮ ಸ್ನೇಹಿತರೊಂದಿಗೆ ಕೂಡಿ ತಮ್ಮದೇ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಇದಕ್ಕೆ ಬಿಯರ್ ಬೈಸೆಪ್ಸ್ ಎಂದು ನೇಮಿಸಿದರು. ಇಲ್ಲಿ ಇವರು ಮೊದಲಿಗೆ ಫಿಟ್ನೆಸ್ ಹಾಗು ಆರೋಗ್ಯದ ಕುರಿತಾಗಿ ಮಾಹಿತಿಗಳನ್ನು ನೀಡುತ್ತಿದ್ದರು. ಈಗ, ಇದೆ ಚಾನೆಲ್ ಫ್ಯಾಷನ್, ಮೆಂಟಲ್ ಫಿಟ್ನೆಸ್, ಎಂಟ್ರೋಪ್ರೆನ್ಯೂರ್ಷಿಪ್ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ, 2019ರಲ್ಲಿ, ಈ ಚಾನೆಲಿನಲ್ಲಿ ‘ದಿ ರಣವೀರ್ ಶೋ’ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ, ಸುಧಾ ಮೂರ್ತಿ, ಗುರು ಗೌರ್ ಗೋಪಾಲ್ ದಾಸ್, ಜೇ ಶೆಟ್ಟಿ, ತಾಪಸೀ ಪನ್ನು, ಪ್ರಾಜೆಕ್ಟ್‌ ಕೋಲಿ ಮುಂತಾದ ಜನಪ್ರಿಯ ವ್ಯಕ್ತಿಗಳನ್ನು ಭೇಟಿ ಮಾಡಿ ಅವಾರ ಜೀವನದ ತುಣುಕುಗಳ ಬಗ್ಗೆ ತಿಳಿದುಕೊಂಡು, ಜನರಿಗೆ ಸ್ಪೂರ್ತಿ ನೀಡಲು ಪ್ರಯತ್ನಿಸುತ್ತಾರೆ. ಜನರ ಮನಸ್ಸಲ್ಲಿ, ‘ಸೋಲು, ಜಯದ ಒಂದು ಮುಖ್ಯ ಭಾಗ’ ಎಂದು ತಲುಪಲು ಪ್ರಯತ್ನಿಸುತ್ತಿದ್ದಾರೆ. ಮಾನಸಿಕ ಆರೋಗ್ಯದ ಬಗೆಗೆ ಬಹಳಷ್ಟು ಮಾಹಿತಿಗಳನ್ನು ನೀಡಲು ಮುಂದಾಗಿದ್ದಾರೆ.


ಇದೀಗ ರಣವೀರ್ ಅವ್ರದ್ದು 3.85M ದೊಡ್ಡ ಕುಟುಂಬ. ಇಷ್ಟೇ ಅಲ್ಲ, ಅವರು, ಪ್ರಖ್ಯಾತ social media entrepreneur, motivational speaker ಹಾಗೂ leadership coach ಆಗಿ, ಭಾರತದ ಪ್ರತಿಯೊಂದು ಯುವ ಮನಸ್ಸುಗಳನ್ನು ಗೆದ್ದಿದ್ದಾರೆ. ಯುವಕರಿಗೆ ಸ್ಪೂರ್ತಿಯಾಗಿ ರಾರಾಜಿಸುತ್ತಿದ್ದಾರೆ. 


ಪ್ರತಿಯೊಬ್ಬ ಯುವಕನೂ ಒಂದಲ್ಲ ಒಂದು ರೀತಿಯಲ್ಲಿ ದಾರಿ ತಪ್ಪುತ್ತಾನೆ. ಇದು ಸರ್ವೇಸಾಮಾನ್ಯ. ಆದರೆ, ತಪ್ಪು ದಾರಿ ಹಿಡಿದ ಮನಸ್ಸು ಸರಿಯಾದ ದಾರಿಗೆ ಹಿಂದಿರುಗುವುದು ಅತೀ ಮುಖ್ಯ. ಅದು ಜೀವನದ ಅತೀ ದೊಡ್ಡ ಗೆಲುವು. ಇದಕ್ಕೆ ರಣವೀರ್ ಅಲಹಾಬಾದಿಯ ಸ್ಪೂರ್ತಿ.

-ಧನ್ಯ 

ತೃತೀಯ ಪತ್ರಿಕೋದ್ಯಮ 

ವಿವೇಕಾನಂದ ಪದವಿ ಕಾಲೇಜು , ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top