ಸತ್ಸಂಗ ಸಂಪದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಶಶಿಕಲಾ ಜೊಲ್ಲೆ

Upayuktha
0

ಬೆಳಗಾವಿ: ಇಲ್ಲಿನ ಯಮಕನಮರಡಿಯ ಬಿ.ಬಿ ಹಂಜಿ ಇಂಟರ್ ನ್ಯಾಷನಲ್ ಮತ್ತು ವಾಯ್ .ವಿ.ಎಸ್. ಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ 'ಸಖೀ 2022' ಅಂತರಾಷ್ಷ್ರೀಯ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಸರ್ಕಾರದ ಮಾನ್ಯ ಮುಜರಾಯಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆರವರಿಗೆ ಬೆಂಗಳೂರಿನ ಸಂಸ್ಕೃತಿ ಚಿಂತಕ – ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರು ಬರೆದಿರುವ ಸದ್ವಿಚಾರಗಳ ಸಂಕಲನ 'ಸತ್ಸಂಗ ಸಂಪದ' ಕೃತಿಯನ್ನು ಬಿ.ಬಿ ಹಂಜಿ ಇಂಟರ್ ನ್ಯಾಷನಲ್ ಶಾಲೆ ಮುಖ್ಯಸ್ಥೆ ಶ್ರೀಮತಿ ಪೂಜಾ ಹಂಜಿರವರು ನೀಡಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಸಚಿವರು ಮಾತನಾಡುತ್ತ ನವನಾಗರೀಕತೆಯ ಇಂದಿನ ಯುಗದಲ್ಲಿ ಸನಾತನ ಸಂಸ್ಕೃತಿಯ ಸಾರಸರ್ವಸ್ವವನ್ನು ಸರಳ ಭಾಷೆಯಲ್ಲಿ ತಿಳಿಸುವ ಈ ಕೃತಿ ಸಾಧನೆಯ ಪಥದಲ್ಲಿರುವ ಪ್ರತಿಯೊಬ್ಬರು ಓದಬೇಕಾದ ಅಮೂಲ್ಯ ಗ್ರಂಥ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top