|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೂರೂರಿನಲ್ಲಿ ಏ. 27ರಿಂದ ರಾಮಕಥಾ

ಮೂರೂರಿನಲ್ಲಿ ಏ. 27ರಿಂದ ರಾಮಕಥಾ


ಗೋಕರ್ಣ: ಕುಮಟಾ ತಾಲೂಕು ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಏಪ್ರಿಲ್ 27ರಿಂದ ಮೇ 1ರವರೆಗೆ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರ ರಾಮಕಥಾ ಸರಣಿ ಕಾರ್ಯಕ್ರಮ ನಡೆಯಲಿದೆ.


ಗೀತೆ, ನೃತ್ಯ, ಚಿತ್ರ ಮುಂತಾದ ದೃಶ್ಯ- ಶ್ರಾವ್ಯ ಕಲಾಮಾಧ್ಯಮಗಳ ಮೂಲಕ ವಾಲ್ಮೀಕಿ ರಾಮಾಯಣದ ಪುನರವತರಣವನ್ನು ಶ್ರೀಗಳು ಅನುಗ್ರಹಿಸಲಿದ್ದಾರೆ ಎಂದು ರಾಮಕಥಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಆರ್.ಜಿ.ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ವಾಲ್ಮೀಕಿ ರಾಮಾಯಣದ ಸಾಗರ ಸೇತು ಕಥಾಭಾಗದ ಪ್ರವಚನವನ್ನು ಐದು ದಿನಗಳ ಕಾಲ ಶ್ರೀಗಳು ನಡೆಸಿಕೊಡುವರು. ಶ್ರೀರಾಮನ ಪರಿವಾರ ಹಾಗೂ ಕಪಿ ಸೈನ್ಯ ಲಂಕೆಗೆ ತೆರಳಲು ಸಮದ್ರಕ್ಕೆ ಸೇತುವೆ ನಿರ್ಮಿಸುವಲ್ಲಿಂದ ಹಿಡಿದು ಲಂಕೆಯಲ್ಲಿ ಶ್ರೀರಾಮನ ಪದಾರ್ಪಣೆ ವರೆಗಿನ ಕಥಾಭಾಗ ಬಿಂಬಿಸಲಾಗುವುದು ಎಂದು ವಿವರಿಸಿದ್ದಾರೆ.


ನಾಡಿನ ಖ್ಯಾತ ಸಂಗೀತಗಾರರು ಮತ್ತು ಖ್ಯಾತ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಸೇರಿದಂತೆ ಹಲವು ಮಂದಿ ಕಲಾವಿದರು ಗಾಯನ, ವಾದನ, ಚಿತ್ರಕಲೆ, ರೂಪಕ ಪ್ರಸ್ತುತಪಡಿಸುವರು.


ರಾಮಕಥೆಯ ಆಹ್ವಾನ ಪತ್ರಿಕೆಯನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಇತ್ತೀಚೆಗೆ ಬಿಡುಗಡೆ ಮಾಡಿದರು. ಅಂತೆಯೇ ರಾಮಕಥಾ ಕಾರ್ಯಾಲಯವನ್ನು ಪ್ರಗತಿ ವಿದ್ಯಾಲಯದಲ್ಲಿ ಅಧಿಕೃತವಾಗಿ ಆರಂಭಿಸಲಾಯಿತು.


ನಿರ್ವಹಣಾ ಸಮಿತಿಯ ಮಾರ್ಗದರ್ಶಕ ಸುಬ್ರಾಯ ಭಟ್ಟ, ಕೋಣಾರೆ, ಕಾರ್ಯದರ್ಶಿಗಳಾದ ಟಿ.ಎಸ್.ಭಟ್ಟ, ಅಣ್ಕೆ. ಎಸ್.ವಿ.ಹೆಗಡೆ, ಮತ್ತು ವಿ.ಎಸ್.ಹೆಗಡೆ ಕೋಣಾರೆ, ಡಾ.ಎಸ್.ವಿ.ಭಟ್ಟ, ಜಿ.ಎಂ.ಭಟ್ಟ,  ಪ್ರಸಾರ ಸಂಯೋಜಕ ಅರುಣ ಹೆಗಡೆ, ರವಿ ಹೆಗಡೆ, ಕೋಣಾರೆ, ಟಿ.ವಿ.ಹೆಗಡೆ ಕಲ್ಲಬ್ಬೆ, ಎಲ್. ಆರ್. ಹೆಗಡೆ. ಕಲ್ಲಬ್ಬೆ, ಟಿ.ಆರ್.ಜೋಶಿ ಕಲ್ಲಬ್ಬೆ, ವಿಷ್ಣು ಹೆಗಡೆ, ಕೋಣಾರೆ, ಜಿ.ಜಿ.ಭಟ್ಟ ಕೆಕ್ಕಾರ, ಎಂ. ಐ. ಭಟ್ಟ ಕಲ್ಲಬ್ಬೆ. ದಿನೇಶ ಭಟ್ಟ. ಚಂದಿಮನೆ, ಜಿ.ಎಂ.ಹೆಗಡೆ ಹೊಸಾಡ, ಉಪಸ್ಥಿತರಿದ್ದರು. ರಘುರಾಮ ಶಾಸ್ತ್ರೀಯವರು ಪೂಜಾ ವಿಧಿಗಳನ್ನು ನೆರವೇರಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم