|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಭಜನೆ, ಸತ್ಸಂಗ ವೃದ್ಧಾಪ್ಯದ ನಂತರ ಎಂಬ ಭ್ರಮೆಯಿಂದಲೇ ನಮ್ಮ ಅವನತಿ'

'ಭಜನೆ, ಸತ್ಸಂಗ ವೃದ್ಧಾಪ್ಯದ ನಂತರ ಎಂಬ ಭ್ರಮೆಯಿಂದಲೇ ನಮ್ಮ ಅವನತಿ'


ಪುತ್ತೂರು: ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಭಜನೆ ಮತ್ತು ಸತ್ಸಂಗ ಕಾರ್ಯಕ್ರಮ ಭಾನುವಾರ (ಮಾ.27) ನಡೆಯಿತು. ನೆಹರೂ ನಗರದ ಶಿವಮಣಿ ತಂಡದವರು ಭಜನೆ ನಡೆಸಿಕೊಟ್ಟರು.


ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಪ್ರಾಸ್ತಾವಿಕವಾಗಿ ಮಾತನಾಡುತ್ತಾ- "ಭಜನೆ ಸತ್ಸಂಗಗಳು ವೃದ್ಧಾಪ್ಯದ ನಂತರ ಎಂಬ ಭ್ರಮೆಯಿಂದಾಗಿ ನಾವು ಅವನತಿಯತ್ತ ಸಾಗುತ್ತಿದ್ದೇವೆ. ಪಾಂಡಿತ್ಯಕ್ಕೂ ಆಧ್ಯಾತ್ಮಕ್ಕೂ ಸಂಬಂಧವಿಲ್ಲ. ಸಂಸ್ಕೃತ ಭಾಷೆ ಗೊತ್ತಿದ್ದ ಮಾತ್ರಕ್ಕೆ ಸಂಸ್ಕೃತಿ ಇದೆ ಎಂದು ಅರ್ಥವಲ್ಲ. ಜಾಲತಾಣಗಳಲ್ಲಿ ಕಾಣಿಸಿಕೊಂಡ ತಕ್ಷಣ ಸ್ವಾಮೀಜಿ ಆಗುವುದಿಲ್ಲ. ಅದಕ್ಕೆ ಸಾಧನ ಅನುಷ್ಠಾನ ಬೇಕು" ಎಂದು ಹೇಳಿದರು.


ನಂತರ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಮಹಾರಾಜ್ ಇವರು ಸತ್ಸಂಗ ಪ್ರವಚನ ನಡೆಸಿಕೊಟ್ಟರು. ಅವರು ಮಾತನಾಡುತ್ತಾ- "ನಂಬಿಕೆಗೆ ಇನ್ನೊಂದು ಹೆಸರು ಗಿರೀಶ್ ಚಂದ್ರ ಘೋಷ್. ಅವರು ಶ್ರೀರಾಮಕೃಷ್ಣರ ಬಳಿ ಬಂದು ಪರಿವರ್ತನೆ ಹೊಂದಿದರು. ಇದು ಸತ್ಸಂಗದ ಪ್ರಭಾವ. ನಮ್ಮ ಅವನತಿಗೆ ನಾವೇ ಕಾರಣ. ಜೀವನದಲ್ಲಿ ಭಕ್ತಿ ನಾಮಸ್ಮರಣೆ ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕ. ವೇದಾಂತವನ್ನು ಅತ್ಯಂತ ಸರಳ ಭಾಷೆಯಲ್ಲಿ ಶ್ರೀರಾಮಕೃಷ್ಣ ಪರಮಹಂಸರು ಜನತೆಗೆ ತಿಳಿಸಿಕೊಟ್ಟರು. ಕೇವಲ ಭಾಷಣಗಳು ಪರಿವರ್ತನೆ ತರಲಾರದು. ನಾವು ನಮ್ಮ ಬದುಕಿನಲ್ಲಿ ಅವುಗಳನ್ನು ಆಚರಣೆಗೆ ತಂದಾಗ ಮಾತ್ರ ಬದಲಾವಣೆಯನ್ನು ಕಾಣುವುದು ಸಾಧ್ಯ" ಎಂದು ಹೇಳಿದರು.  

ಕಾರ್ಯಕ್ರಮವು ಫೇಸ್ಬುಕ್ ಪೇಜಿನಲ್ಲಿ ಲೈವ್ ಆಗಿ ಕೂಡ ಪ್ರಸಾರಗೊಂಡಿತ್ತು. 


ಮಹಿಳಾ ಥೆರಪಿಸ್ಟ್ ಶ್ರೀಮತಿ ಅಖಿಲ ಗಣೇಶ್ ಕನ್ಯಾನ ಆಸ್ಪತ್ರೆಯಲ್ಲಿ ನಡೆಯುವ ಮೂಲವ್ಯಾಧಿ ತಪಾಸಣಾ ಶಿಬಿರ, ಪಂಚಕರ್ಮ ಚಿಕಿತ್ಸೆ, ಸ್ವರ್ಣ ಪ್ರಾಶನ ಚಟುವಟಿಕೆಗಳ ವರದಿ ನೀಡಿದರು. ಪುರುಷ ಥೆರಪಿಸ್ಟ್ ಶ್ರೀ ವಿವೇಕ್ ಕಾಮತ್ ಬೊಳುವಾರು ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಿಸಿದರು. ನಂತರ ಸ್ವಾಮೀಜಿಯವರಿಂದ ಪೂಜೆ, ಅತಿಥಿಗಳಿಗೆ ಪ್ರಸಾದ ವಿತರಿಸಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم