ಉಡುಪಿ: ಮಣಿಪಾಲ್ ಅಕಾಡೆಮಿಯ ಮೊದಲ ಮಹಾವಿದ್ಯಾಲಯವೆಂದೇ ಖ್ಯಾತಿಪಡೆದ ಉಡುಪಿ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘಕ್ಕೆ ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಸವಾ೯ಮತದಿಂದ ನೂತನ ಅಧ್ಯಕ್ಷರಾಗಿ ಆಯ್ಕೆ ಗೊಂಡಿರುತ್ತಾರೆ.
ಇದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಪ್ರೊ.ಶೆಟ್ಟಿಯವರು ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನಲ್ಲಿ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾಗಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಎಂ. ವಿಶ್ವನಾಥ ಪೈ ಆಯ್ಕೆಗೊಂಡಿರುತ್ತಾರೆ. ಕೇೂಶಾಧಿಕಾರಿಗಳಾಗಿ ದೀಪಾಲಿ ಕಾಮತ್, ಉಪಾಧ್ಯಕ್ಷರಾಗಿ ಸಿ.ಎ. ಪೀತೀಶ್ ಡಿ'ಸಾ, ಜೊತೆ ಕಾರ್ಯದರ್ಶಿಗಳಾಗಿ ವಿನೇೂದ ಕಾಮತ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ.ಪ್ರಶಾಂತ್ ಅಡಿಗ, ಸಂಧ್ಯಾ ಪ್ರಭು, ಶ್ಯಾಮಲಾ ಆಯ್ಕೆಯಾಗಿದ್ದಾರೆ.
ಹೊಸದಾಗಿ ಆಯ್ಕೆ ಗೊಂಡ ಸದಸ್ಯರನ್ನು ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಕಾಲೇಜಿನ ಪ್ರಾಂಶುಪಾಲರುಗಳಾದ ಡಾ. ದೇವಿದಾಸ್ ನಾಯಕ್, ಮಾಲತಿದೇವಿ ಅಭಿನಂದಿಸಿ ಮಾತನಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ