ಗಾಂಧೀ ಲೇಖನ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಣೆ

Upayuktha
0

ಬೆಂಗಳೂರು: ಸರ್ವೋದಯ ದಿನದ ಅಂಗವಾಗಿ ಗಾಂಧೀ ಶಾಂತಿ ಪ್ರತಿಷ್ಠಾನ ಮತ್ತು ಅಮರ ಬಾಪು ಚಿಂತನ ಸಹಯೋಗಯಲ್ಲಿ 'ಅಂದಿಗೂ ಇಂದಿಗೂ ಗಾಂಧೀಜಿ ವಿಚಾರಧಾರೆಗಳು ಪ್ರಸ್ತುತ' ಪ್ರಬಂಧ ಹಾಗೂ 'ಗಾಂಧಿಗೆ ಒಂದು ಪತ್ರ' ಸ್ಪರ್ಧೆಯನ್ನು ಆಯೋಜಿಸಿತ್ತು. ಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಪಿಇಎಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಫಣೀಂದ್ರ. ಎ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ವಿಜೇತರಾದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಎಸ್. ಸ್ತುತಿ ಹಾಗು ಜ್ಯೋತಿ ಎಸ್.ಆರ್ ರವರಿಗೆ ಪಿಇಎಸ್ ವಿಶ್ವವಿದ್ಯಾಲಯ ಕುಲಾಧಿಪತಿಗಳಾದ ಹಿರಿಯ ಶಿಕ್ಷಣ ತಜ್ಞ ಡಾ.ಎಂ.ಆರ್. ದೊರೆಸ್ವಾಮಿರವರು ಪ್ರಶಸ್ತಿ ನೀಡಿ ಗೌರವಿಸಿದರು.


ದಶಮಾನೋತ್ಸವ ಆಚರಿಸುತ್ತಿರುವ ಗಾಂಧಿ ತತ್ವ ಪ್ರಸರಣದ ಜೀರಿಗೆ ಲೋಕೇಶ್ ಸಂಪಾದಕತ್ವದ ಅಮರ ಬಾಪು ಚಿಂತನ ದ್ವಿಭಾಷಾ - ದ್ವೈಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡುತ್ತ ಯುವಜನರಿಗಾಗಿ ಏರ್ಪಡಿಸಿದ್ದ ಈ ಸ್ಪರ್ಧೆ ಗಾಂಧೀಜಿ ಇಂದಿಗೂ ಯುವ ಮನಸ್ಸುಗಳ ಆದರ್ಶ ಹಾಗೂ ಆಕರ್ಷಣೆಯ ವ್ಯಕ್ತಿಯಾಗಿ ಉಳಿದಿದ್ದಾರೆ ಅನ್ನುವ ಸಮಾಧಾನ ದೊರಕುತ್ತದೆ. ಅಸ್ಪೃಶ್ಯತೆ, ಲಂಚ, ತತ್ವವಿಲ್ಲದ ರಾಜಕಾರಣ, ಚುನಾವಣಾ ಭ್ರಷ್ಟತೆ ಇವುಗಳ ಕುರಿತು ಆಕ್ರೋಶ ಇದ್ದರೂ ಗಾಂಧೀ ಮಾರ್ಗದಲ್ಲಿ ದೇಶ ಸಾಧಿಸಿದ ಪ್ರಗತಿಯ ಬಗ್ಗೆ ಮೆಚ್ಚಗೆಯ ಮಾತುಗಳನ್ನೂ ಈ ಲೇಖನಗಳಲ್ಲಿ ಗಮನಿಸಬಹುದು. ಎಲ್ಲ ಸ್ಪರ್ಧಿಗಳೂ ಗಾಂಧಿ ಮಾರ್ಗ ಮತ್ತು ಮೌಲ್ಯಗಳ ಪ್ರಸ್ತುತತೆಯನ್ನು ಎತ್ತಿ ಹಿಡಿದಿರುವುದು ಈ ಬರಹಗಳಲ್ಲಿ ಕಂಡು ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಪಿಇಎಸ್ ಪದವಿ ಹಾಗೂ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಸಿ.ನಾರಾಯಣ ರೆಡ್ಡಿ, ಕನ್ನಡ ವಿಭಾಗ ಉಪನ್ಯಾಸಕ ಸಚಿನ್ ಬನವಾಸಿ ಹಾಗು ಮಾಧ್ಯಮ ಸಮಾಲೋಚಕ - ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top