||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ವಿದ್ಯಾಲಯದಲ್ಲಿ ಮಾರ್ಚ್ 28ರಿಂದ ಪ್ರೇರಣಾ 2022- ಬೇಸಗೆ ಶಿಬಿರ

ಅಂಬಿಕಾ ವಿದ್ಯಾಲಯದಲ್ಲಿ ಮಾರ್ಚ್ 28ರಿಂದ ಪ್ರೇರಣಾ 2022- ಬೇಸಗೆ ಶಿಬಿರ

ವಿವಿಧ ಮಾಹಿತಿ ಕಾರ್ಯಕ್ರಮಗಳು ಹಾಗೂ ವ್ಯಕ್ತಿತ್ವ ವಿಕಸನ ಚಟುವಟಿಕೆಗಳು


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ) ದಲ್ಲಿ ಸಂಸ್ಥೆಯ ಐದನೆಯ ತರಗತಿಯಿಂದ ಒಂಬತ್ತನೆಯ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ‘ಪ್ರೇರಣಾ ೨೦೨೨’ ಬೇಸಗೆ ಶಿಬಿರ ನಡೆಯಲಿದೆ. ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಾಧಾರಿತ ಶಿಕ್ಷಣದ ನೆಲೆಯಲ್ಲಿ ಈ ಶಿಬಿರ ನಡೆಯಲಿದ್ದು, ಇದರ ಉದ್ಘಾಟನೆ ಮಾರ್ಚ್ 28ರಂದು ನಡೆಯಲಿದೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.


ಹಿರಿಯ ಕನ್ನಡ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಶ್ರೀಧರ ಎಚ್.ಜಿ ಶಿಬಿರವನ್ನು ಉದ್ಘಾಟಿಸುವರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿರುವರು.


ಮಾರ್ಚ್ 28ರಂದು ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ಕಾರ್ಯಚಟುವಟಿಕೆಗಳು ನಡೆಯಲಿದ್ದು, ಉಪನ್ಯಾಸಕ ಹಾಗೂ ವಾಗ್ಮಿ ಆದರ್ಶ ಗೋಖಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ತದನಂತರ ನಿತ್ಯ ಬದುಕಿನಲ್ಲಿ ರಸಾಯನಶಾಸ್ತ್ರ ಎಂಬ ವಿಷಯದ ಬಗೆಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕಿಯರಾದ ಅಕ್ಷತಾ ಹಾಗೂ ವಿನುತಾ, ನಿತ್ಯ ಬದುಕಿನಲ್ಲಿ ಆಯುರ್ವೇದ ಎಂಬ ವಿಷಯದ ಬಗೆಗೆ ಆಯುರ್ವೇದ ವೈದ್ಯ ಡಾ. ಸುರೇಶ್ ಕೂಡೂರು ಗೋಷ್ಠಿ ನಡೆಸುವರು. ಅಂತೆಯೇ ಸುಳ್ಯದ ಕಲಾವಿದ ಪಟ್ಟಾಭಿರಾಮ ಅವರಿಂದ ಮಿಮಿಕ್ರಿ, ಸ್ಕೌಟ್ ಅಂಡ್ ಗೈಡ್ಸ್ ಘಟಕದ ಮಾರ್ಗದರ್ಶಕಿ ಪ್ರಫುಲ್ಲ ಕೆ ಅವರಿಂದ ಪ್ರಥಮ ಚಿಕಿತ್ಸೆ ಎಂಬ ವಿಷಯವಾಗಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ.


ಮಾರ್ಚ್ 29ರಂದು ರಸ್ತೆ ಸುರಕ್ಷತೆ ವಿಷಯವಾಗಿ ಪುತ್ತೂರಿನ ಆರ್‌ಟಿಒ ಆನಂದ, ನೆಲ-ಜಲ ಸಂರಕ್ಷಣೆ ಬಗೆಗೆ ಹಿರಿಯ ಪತ್ರಕರ್ತ ನಾ. ಕಾರಂತ ಪೆರಾಜೆ, ನಮ್ಮ ದೇಶ ನಮ್ಮ ಹೆಮ್ಮೆ ಎಂಬ ವಿಷಯವಾಗಿ ಯೋಗ ಶಿಕ್ಷಕಿ ಶರಾವತಿ, ಮೋಜಿನ ಗಣಿತ ಹಾಗೂ ನಲಿಕಲಿ ವಿಷಯವಾಗಿ ಈಶ್ವರಮಂಗಲದ ಸಂಪನ್ಮೂಲ ವ್ಯಕ್ತಿ ಪೂರ್ಣಾತ್ಮರಾಮ ಅವರು ಮಾಹಿತಿ ನೀಡುವರು. ಮಾರ್ಚ್ 30ರಂದು ಪಂಚಾಂಗ ಹಾಗೂ ಆಚರಣೆಗಳು ಎಂಬ ವಿಷಯವಾಗಿ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ,  ಮಾತುಗಾರಿಕೆ ಒಂದು ಕಲೆ ಎಂಬ ವಿಷಯವಾಗಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ, ಪೋಸ್ಕೋ ಕಾಯಿದೆ ಕುರಿತಾಗಿ ನ್ಯಾಯವಾದಿ ಸೂರ್ಯನಾರಾಯಣ ಭಟ್, ಪಂಚಕೋಶ ವಿಚಾರವಾಗಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕಿ ವಿನುತಾ, ಆಟ ರಂಗಾಟ ವಿಚಾರವಾಗಿ ರಂಗಕರ್ಮಿ  ಮೌನೇಶ್ ವಿಶ್ವಕರ್ಮ, ಅಗ್ನಿ ಸಂರಕ್ಷಣೆ ವಿಷಯವಾಗಿ ಪುತ್ತೂರಿನ ಅಗ್ನಿಶಾಮಕ ಘಟಕದ ವತಿಯಿಂದ ಉಪನ್ಯಾಸ ಹಾಗೂ ಚಟುವಟಿಕೆಗಳು ನಡೆಯಲಿವೆ.

 

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾರ್ಗದರ್ಶನ, ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ ನೇತೃತ್ವ ಹಾಗೂ ಶಿಕ್ಷಕ ಸತೀಶ್ ಇರ್ದೆ ಸಂಯೋಜನೆಯಲ್ಲಿ ಶಿಬಿರ ಆಯೋಜನೆಗೊಳ್ಳಲಿದೆ. ಶಿಕ್ಷಕರಾದ ಸುಜನಿ ಬೋರ್ಕರ್, ಮಾಲತಿ ಶೆಟ್ಟಿ, ಶಿಲ್ಪಾ, ಸುಮನಾ ಭಟ್, ಸುಜಯ, ಕುಸುಮ, ಸುನೀತ, ನಿರ್ಮಲ, ಕೃತಿಕ, ಸೌಂದರ್ಯ, ಸುಷ್ಮಾ, ಅಶ್ವಿನಿ, ಪ್ರಿಯಾಶ್ರೀ, ಶೈಲಶ್ರೀ, ಚಂದ್ರಕಲಾ, ಸುಚಿತ್ರಾ, ಸುಚೇತಾ, ರಮೇಶ್ ಹಾಗೂ ದಿನೇಶ್ ಶಿಬಿರದ ವ್ಯವಸ್ಥೆಯನ್ನು ನಿರ್ವಹಿಸಲಿದ್ದಾರೆ. ಕಚೇರಿ ಸಹಾಯಕರಾದ ವಿದ್ಯಾ ಮತ್ತು ಹರೀಶ್ ಸಹಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿhit counter

0 Comments

Post a Comment

Post a Comment (0)

Previous Post Next Post