ಪೆರ್ಲ: ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಇರುವ ಕಾಸರಗೋಡು ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮ ಮಂದಿರದಲ್ಲಿ ಮಂಗಳವಾರ (ಮಾ.1) ಸಾಯಂಕಾಲ ಪ್ರತಿವರ್ಷದಂತೆ ಸಂಭ್ರಮದಿಂದ ಶಿವರಾತ್ರಿ ಮಹೋತ್ಸವವು ಸಂಪನ್ನವಾಯಿತು.
ಸಾಯಂ ಘಂಟೆ 4.30ಕ್ಕೆ ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ರುದ್ರಾಭಿಷೇಕ-ಶಿವಪೂಜೆ, ಪಂಚಾಕ್ಷರೀ ಜಪ, ಶಿವಮಾನಸ ಪೂಜಾ ಸ್ತೋತ್ರ ಪಾರಾಯಣ, ಗೋಪೂಜೆ, ಗೋಪಾಲಕೃಷ್ಣ ಪೂಜೆ, ದೀಪೋತ್ಸವ ನಡೆಯಿತು.
ಪೂರ್ವ ಸಂಪ್ರದಾಯದಂತೆ ವಿಭೂತಿ ತಯಾರಿಗಾಗಿ ಗೋಮಯಜ್ವಲನ ನಡೆಯಿತು. ಹೊಸನಗರ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ನಡೆದ ಸೋಮಸಪರ್ಯಾದಲ್ಲಿ ಅರ್ಚನೆ, ಪ್ರಸಾದಕ್ಕಾಗಿ ಬಜಕೂಡ್ಲು ಗೋಶಾಲೆಯಲ್ಲಿ ನಡೆದ ವಿಭೂತಿ ತಯಾರಿಯಲ್ಲಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.
ಪರಮಪೂಜ್ಯ ಶ್ರೀಸಂಸ್ಥಾನದವರ ನಿರ್ದೇಶನದಂತೆ ಹದಿಮೂರು ಕೋಟಿ ರಾಮತಾರಕ ಜಪದ ಪರಿಪೂರ್ತಿಗಾಗಿ ಸಂಕಲ್ಪಿಸಿ ರಾಮತಾರಕ ಮಂತ್ರಜಪವನ್ನು ಪ್ರಾರಂಭಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ