ಶ್ರೀ ವಿಶ್ವೇಶತೀರ್ಥರ ಸಂಸ್ಮರಣಾ ರಥಕ್ಕೆ ಮಂಗಳೂರಿನಲ್ಲಿ ನಾಳೆ ಸ್ವಾಗತ

Upayuktha
0



ಮಂಗಳೂರು: ಹರಿಪಾದಗೈದ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಶ್ರೀಗಳ ಹುಟ್ಟೂರಾದ  ರಾಮಕುಂಜ ಯರ್ಟಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರಲ್ಲಿ ನಿರ್ಮಿತವಾದ ಚಂದ್ರ ಮಂಡಲ ರಥವು ಕೋಟೇಶ್ವರದಿಂದ ಮಂಗಳೂರು ಮಾರ್ಗವಾಗಿ ರಾಮಕುಂಜ  ಯರ್ಟಾಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಾಗಲಿರುವುದು.


ಈ ಸಂದರ್ಭ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಬಳಿ ರಾಷ್ಟ್ರೀಯ ಹೆದ್ದಾರಿಯ ಪಾರ್ಶ್ವದಲ್ಲಿ ನಾಳೆ  ಮಾರ್ಚ್ 3 ಗುರುವಾರ ಮಧ್ಯಾಹ್ನ 12 ಗಂಟೆಗೆ ನೂತನ ರಥವನ್ನು ಸ್ವಾಗತಿಸಲಾಗುವುದು. ಗಣ್ಯರ ಉಪಸ್ಥಿತಿಯಲ್ಲಿ ರಥಕ್ಕೆ ಪುಷ್ಪಾರ್ಚನೆಗೈದು ಬೀಳ್ಕೊಡಲಾಗುವುದು. ಶ್ರೀಗಳ ಅಭಿಮಾನಿಗಳು ಪುಷ್ಪದೊಂದಿಗೆ ಭಾಗವಹಿಸಬೇಕೆಂದು ಎಸ್. ಪ್ರದೀಪ ಕುಮಾರ ಕಲ್ಕೂರ (9845083736)  ವಿನಂತಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post Views: 1238

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top