30 ವರ್ಷಗಳ ನಂತರ ಬಂದ ಸುಂದರ ಸಂಸ್ಕೃತ ಚಲನಚಿತ್ರ- ಏಕಚಕ್ರಮ್

Upayuktha
0

ಅಂದಿನ- ಇಂದಿನ 'ಬಕಾಸುರರ' ಚಿತ್ರಣವನ್ನು ಯಶಸ್ವಿಯಾಗಿ ಕಟ್ಟಿಕೊಟ್ಟ ನಿರ್ದೇಶಕ ಸುಚೇಂದ್ರ ಪ್ರಸಾದ್


ಬೆಂಗಳೂರು: ಕಳೆದ ಭಾನುವಾರ (ಮಾರ್ಚ್ 27ರಂದು) ಏಕಚಕ್ರಮ್ ಚಲನಚಿತ್ರವು ಸುಚಿತ್ರ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಮೊದಲ ಪ್ರದರ್ಶನ ಕಂಡಿತು.


ಈ ಚಿತ್ರವು ವಿದ್ವಾನ್ ನಡಹಳ್ಳಿ ರಂಗನಾಥಶರ್ಮರವರ ಕೃತಿಯನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ.


30 ವರ್ಷಗಳ ನಂತರ ಒಂದು ಸಂಸ್ಕೃತ ಚಿತ್ರವು ಮೂಡಿಬಂದಿರುವುದು ಸಂಸ್ಕೃತ ಲೋಕಕ್ಕೆ ಹಾಗೂ ಸಂಸ್ಕೃತ ಅಭಿಮಾನಿಗಳಿಗೆ ಅತೀವ ಸಂತಸ ತಂದಿದೆ.


ನಿರ್ದೇಶಕರಾದ ಶ್ರೀ ಸುಚೇಂದ್ರ ಪ್ರಸಾದ್ ಮತ್ತು ಅವರ ತಂಡವು ಬಹಳ ಅಚ್ಚುಕಟ್ಟಾಗಿ ದ್ವಾಪರಯುಗದ ಬಕಾಸುರ ಹಾಗೂ ಇಂದಿನ ಸಮಾಜದಲ್ಲಿ ಇರುವ ಬಕಾಸುರರ ಚಿತ್ರಣವನ್ನು ತೆರೆಯ ಮೇಲೆ ಪ್ರೇಕ್ಷಕರಿಗೆ ಮನದಟ್ಟಾಗುವಂತೆ ಚಿತ್ರಿಸಿರುತ್ತಾರೆ.


ಧರ್ಮ ಪುನರ್ ಸ್ಥಾಪಿಸಲು ಭೀಮ ನಂತಹ ಪಾತ್ರದಾರಿಗಳ ಪ್ರಾಮುಖ್ಯತೆ ಇಂದಿನ ಸಮಾಜಕ್ಕೆ ಅಗತ್ಯವಿರುವುದನ್ನು ತಮ್ಮ ಚಿತ್ರದಲ್ಲಿ ನಿರೂಪಿಸಿರುತ್ತಾರೆ.


ಚಿತ್ರತಂಡವು ಸಂಸ್ಕೃತ ಭಾಷೆಯ ಉಳಿವಿಗಾಗಿ ಶ್ರಮ ಪಟ್ಟಿರುವುದು ಚಿತ್ರದ ಪೂರ ಎದ್ದು ಕಾಣುತ್ತದೆ ಇದು ನಮ್ಮೆಲ್ಲರಿಗೂ ಬಹಳ ಹೆಮ್ಮೆ ಹಾಗೂ ಶ್ಲಾಘನೀಯವಾದ ವಿಚಾರವಾಗಿದೆ.


ಇಂದಿನ ಕಾಲದಲ್ಲಿ ವಾಣಿಜ್ಯ ಉದ್ದೇಶ ಪೂರಿತ ಚಿತ್ರಗಳೆ ಅಬ್ಬರಿಸುವಾಗ ಇಂತಹ ಚಿತ್ರವು ನಿರ್ಮಾಣವಾಗಿರುವುದು ನಮ್ಮೆಲ್ಲರ ಅದೃಷ್ಟವೇ ಸರಿ, ಆದಕಾರಣ ನಾವೆಲ್ಲರೂ ಒಂದುಗೂಡಿ ಈ ವಿಶಿಷ್ಟವಾದ ಚಿತ್ರವನ್ನು ಮತ್ತಷ್ಟು ಯಶಸ್ವಿಗೊಳಿಸಲು ಸಹಕರಿಸಬೇಕಾಗಿದೆ.


ಮೊದಲನೆಯ ಪ್ರದರ್ಶನವು ವಿಶೇಷವಾಗಿದ್ದರಿಂದ ಹಾಗೂ ಸೀಮಿತ ಸಂಖ್ಯೆಯ ಆಸನಗಳು ಇದ್ದ ಕಾರಣ ಚಿತ್ರವನ್ನು ವೀಕ್ಷಿಸಲು ಎಲ್ಲರಿಗೂ ಸಾಧ್ಯವಾಗಲಿಲ್ಲ, ಈ ಚಿತ್ರವನ್ನು ಚಿತ್ರಮಂದಿರಗಳ ಮೂಲಕವಷ್ಟೇ ಅಲ್ಲ, ಚಿತ್ರಮಂದಿರಗಳ ಹೊರತಾಗಿಯೂ ಅನ್ಯಾನ್ಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದ ಎಲ್ಲೆಡೆ ಜನರ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಬೇಕಿದೆ.

-ಶ್ಯಾಮ್, ಬೆಂಗಳೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors
Mandovi Motors
To Top