|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತದ ಉತ್ತರದ ತುದಿ ಇಂದಿರಾ ಕೋಲ್ ಅಂತೆ...? ದಕ್ಷಿಣದ ತುದಿ ಇಂದಿರಾ ಪಾಯಿಂಟ್ ಅಂತೆ...? ಇದು 5ನೇ ತರಗತಿ ಪರಿಸರ ಪಠ್ಯ

ಭಾರತದ ಉತ್ತರದ ತುದಿ ಇಂದಿರಾ ಕೋಲ್ ಅಂತೆ...? ದಕ್ಷಿಣದ ತುದಿ ಇಂದಿರಾ ಪಾಯಿಂಟ್ ಅಂತೆ...? ಇದು 5ನೇ ತರಗತಿ ಪರಿಸರ ಪಠ್ಯ


ಮಂಗಳೂರು: ಇದು ಐದನೇ ತರಗತಿಯ ಕನ್ನಡ ಮಾಧ್ಯಮದ ಪರಿಸರ ಅಧ್ಯಯನ ಪಠ್ಯಪುಸ್ತಕ. ಪ್ರೊ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆ ಹಾಗೂ ಡಾ. ಏಕನಾಥ್ ಏಕ್‌ಬೋಟೆ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಪಠ್ಯಪುಸ್ತಕ. ಈ ಪುಸ್ತಕದ 16ನೇ ಅಧ್ಯಾಯ (ಕೊನೆಯ ಅಧ್ಯಾಯ)- ಪಾಠದ ಶೀರ್ಷಿಕೆ: ನಮ್ಮ ಭಾರತ- ರಾಜಕೀಯ ಮತ್ತು ಸಾಂಸ್ಕೃತಿಕ.


ಪಠ್ಯದ ಕೊನೆಯ ಭಾಗದಲ್ಲಿ ಒಂದು ಬಾಕ್ಸ್‌ ಐಟಂ- ಓದಿ- ತಿಳಿ. ಇದರಲ್ಲಿ ಭಾರತದ ಗಡಿಯನ್ನು ನಿರ್ಧರಿಸಿರುವ ಪಠ್ಯದ ರಚನಾಕಾರರ ಮಾನಸಿಕತೆಯನ್ನು ನೀವೇ ನಿರ್ಧರಿಸಿ. ಭಾರತದ ದಕ್ಷಿಣದ ತುದಿ ಇಂದಿರಾ ಕೋಲ್ ಅಂತೆ. ಉತ್ತರದ ತುದಿ ಇಂದಿರಾ ಪಾಯಿಂಟ್ ಅಂತೆ. ಇದ್ಯಾವುದು ಹೊಸ ಪಾಯಿಂಟ್‌? ಕೋಲ್‌?. ನಾವ್ಯಾರೂ ಚಿಕ್ಕವರಿದ್ದಾಗ, ಐದನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಅಥವಾ ಅದರ ನಂತರದ ತರಗತಿಗಳಲ್ಲಾದರೂ ಇಂತಹ ಪದಗಳನ್ನು ಕೇಳಿಯೇ ಇಲ್ಲ. ಭಾರತದ ದಕ್ಷಿಣ ತುದಿ ಕನ್ಯಾಕುಮಾರಿ, ಉತ್ತರದ ತುದಿ ಕಾಶ್ಮೀರ ಅಂತ ಕಲಿತಿದ್ದೇವೆ.


ಈ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿದ್ದವರೂ ಸಹ ಇದೇ ರೀತಿ ಅಧ್ಯಯನ ಮಾಡಿರುತ್ತಾರೆ. ಹಾಗಿದ್ದರೂ ಈ ಇಂದಿರಾ ಪಾಯಿಂಟ್, ಇಂದಿರಾಕೋಲ್‌ಗಳು ಎಲ್ಲಿಂದ ಬಂದವು ಮತ್ತು ಹೇಗೆ ಸೇರ್ಪಡೆಯಾದವು?


ಈ ಪಠ್ಯಪುಸ್ತಕ ರಚನೆಯಾಗಿರುವುದು 2014ರ ಮೇ 27ರಂದು ಕರ್ನಾಟಕ ಸರಕಾರ ಹೊರಡಿಸಿದ ಆದೇಶ ಮೇರೆಗೆ. 2017-18ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬಂದಿದೆ.  ಈ ವಿಚಾರ ಪಠ್ಯಪುಸ್ತಕದ ಮುನ್ನುಡಿಯಲ್ಲೇ ಇದೆ.


ಎಳೆಯ ಮಕ್ಕಳ ತಲೆಗೆ ಈ ರೀತಿ ತಪ್ಪು ವಿಚಾರವನ್ನು ಉದ್ದೇಶಪೂರ್ವಕವಾಗಿಯೇ ಸಾಧ್ಯವಾದಲ್ಲೆಲ್ಲ ತುರುಕಿ ಉದ್ದೇಶಿತ ಅಜೆಂಡಾಗಳನ್ನು ಸೃಷ್ಟಿಸುವ ಗುಲಾಮಿ ಮನಸ್ಥಿತಿ ಇರುವುದು ಈ ಎರಡು ಪದಗಳನ್ನು ಗಮನಿಸಿದರೆ ತಿಳಿಯುತ್ತದೆ.


ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಿಗೋ, ಸರ್ವಾಧ್ಯಕ್ಷರಿಗೋ ಈ ವಿಚಾರ ಗಮನಕ್ಕೆ ಬರದೇ ಹೋಗಬಾರದಿತ್ತು. ನಿರ್ದಿಷ್ಟವಾಗಿ ಈ ಪಠ್ಯವನ್ನು ರಚಿಸಿದ ಮಹಾನುಭಾವ ಯಾರು ಎಂಬುದು ಗೊತ್ತಾದರೆ ಆ ವ್ಯಕ್ತಿಯನ್ನು ಕರೆದು ಇಂದಿರಾಗಾಂಧಿ ಹೆಸರಿನಲ್ಲಿ ಒಂದು ಉನ್ನತ ಪ್ರಶಸ್ತಿಯನ್ನೇ ಕೊಡಬಹುದಾಗಿತ್ತು....!


ಈ ಬಾರಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಾದರೂ ಇಂತಹ ಆಭಾಸಗಳನ್ನು ತೆಗೆದುಹಾಕಿ ಸರಿಯಾದ ವಿಷಯವನ್ನು ಮಕ್ಕಳಿಗೆ ಕಲಿಸುವಂತಾಗಲಿ ಎಂಬುದೇ ನಮ್ಮ ಆಶಯ.

-ಚಂದ್ರಶೇಖರ ಕುಳಮರ್ವ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post