ನಿಯತ್ತಿನಲ್ಲೊಂದು ಪ್ರಾಣಿ

Upayuktha
0


ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿಗಿರುವ ನಿಯತ್ತು ಮನುಷ್ಯನಿಗೆ ಇರಲ್ಲ. ನಾಯಿಯನ್ನು ಸಾಕಿ ಒಂದು ಸ್ವಲ್ಪ ಪ್ರೀತಿ ತೋರಿಸಿ, ಹಸಿವಿಗೆ ಅನ್ನ ನೀಡಿದರಂತೂ ಅದು ಯಾವತ್ತಿಗೂ ಅವರ ಮೇಲಿನ ಬಾಂಧವ್ಯವನ್ನು ತೋರಿಸುತ್ತದೆ. ನಾಯಿಗಿರುವ ಸ್ವಾಮಿನಿಷ್ಠೆಯನ್ನು ಬೇರೆ ಜೀವಿಗಳಲ್ಲಿ ಕಾಣಲು ಸಾಧ್ಯವಿಲ್ಲ. ಹೆಚ್ಚಾಗಿ ನಾಯಿ ತನಗೆ ಹಾನಿಯಾದರೂ ಸರಿಯೇ ತನ್ನ ಯಜಮಾನ ಎಂಬಾತನಿಗೆ ರಕ್ಷಣೆ ಕೊಡುವುದು ನಾಯಿಯ ನಿಯತ್ತಿನ ಅತ್ಯುತ್ತಮ ನಿದರ್ಶನ. ನಾಯಿಯನ್ನು ಮಾನವ ಅದೊಂದು ಯಾವುದಕ್ಕೂ ಪ್ರಯೋಜನವಿಲ್ಲದ ಪ್ರಾಣಿ ಎಂದು ಅಸಡ್ಡೆಯಿಂದ ನೋಡುವನು. ಆದರೆ ಅದು ಯಜಮಾನನ ಋಣವನ್ನು  ಕಿಂಚಿತ್ತು ಉಳಿಸದೆ ನಿಸ್ವಾರ್ಥ ಸೇವೆಯನ್ನು ಮಾಡುವುದರಲ್ಲಿಯೇ ತನ್ನ ಜೀವನವನ್ನು ಕಳೆಯುತ್ತದೆ. ಮನುಷ್ಯ ತನಗೆ ಇನ್ನೊಬ್ಬರಿಂದ ಸಿಕ್ಕಿದ ಪ್ರೀತಿ, ವಿಶ್ವಾಸ, ಸಹಾಯವನ್ನು ಮರೆತರು, ಕೇವಲ ಒಂದು ಪ್ರಾಣಿಯಾದ ನಾಯಿ ಅದನ್ನೆಲ್ಲಾ ಮರೆಯದೆ ತನ್ನ ಕೈಯಲ್ಲಿ ಆಗುವಂತಹ ಕೆಲಸ ಮಾಡುತ್ತದೆ, ನಾಯಿ ಎಷ್ಟು ನಿಯತ್ತನ್ನು ವಿಶ್ವಾಸ ಎಲ್ಲವನ್ನು ಯಜಮಾನನಿಗೆ ತೋರಿಸುತ್ತದೆ ಎಂದು ತಿಳಿಯುವುದಕ್ಕೆ ಒಂದು ಉದಾಹರಣೆಯನ್ನು ಗಮನಿಸಬಹುದು...


ಮುಂಬೈಯಲ್ಲಿ ಒಬ್ಬ ಮನೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದ. ಆತನಿಗೆ ನಾಯಿ ಎಂದರೆ ಇಷ್ಟವಾಗಿತ್ತು. ಅದ  ಕಾರಣ ಒಂದು ನಾಯಿಯನ್ನು ಸಾಕಿಕೊಂಡಿದ್ದ, ಆ ನಾಯಿಯೇ ಆತನ ಗೆಳೆಯ, ದಿನ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಕೆಲಸದ ನಿಮಿತ ಇನ್ನೊಂದು ಊರಿಗೆ ರೈಲಿನಲ್ಲಿ ಹೋಗಿ ಆರು ಗಂಟೆ ಹೊತ್ತಿಗೆ ಮನೆಗೆ ಮರಳುತ್ತಿದ್ದ. ಯಜಮಾನನ ನಾಯಿ ಯಜಮಾನ ಹಾಕಿದ ಅನ್ನ ತಿನ್ನುತ್ತಿತ್ತು ಬಿಟ್ಟರೆ ಬೇರೆ ಯಾರು ಹಾಕಿದರು ಮುಟ್ಟುತ್ತಿರಲಿಲ್ಲ.ಸದಾ ಅವನೊಂದಿಗೆ ರೈಲು ನಿಲ್ದಾಣಕ್ಕೆ ಹೋಗಿ ಯಜಮಾನನನ್ನು ಬಿಟ್ಟು ಬರುತ್ತಿತ್ತು. ಸಾಯಂಕಾಲ ಯಜಮಾನ ಬರುವ ವೇಳೆಗೆ ಮರಳಿ ನಿಲ್ದಾಣಕ್ಕೆ  ಹೋಗಿ ಯಜಮಾನನನ್ನು ಕರೆದೊಯ್ಯುತ್ತಿತ್ತು. ಹಾಗೆ ಯಜಮಾನ ಮತ್ತು ನಾಯಿಯ ದಿನಗಳು ಹೋಗುತ್ತಿದ್ದವು. ಒಂದು ದಿನ ಯಜಮಾನ ಬೆಳಗ್ಗೆಹೋದವನು ವಾಪಸ್ಸು ಬರಲಿಲ್ಲ.ಕಾರಣ ಎಂದರೆ ಆತ ಹೋದ ರೈಲು  ದುರಂತಕೊಳಗಾಗಿತ್ತು. ದುರಂತದಲ್ಲಿ ಯಜಮಾನ ಸಾವನ್ನಪ್ಪಿದ್ದ. ಆದರೆ ಆ ನಾಯಿಗೆ ತಿಳಿದಿರಲಿಲ್ಲ ನಾಯಿ ಮಾತ್ರ ದಿನ ಕಾಯುತ್ತಿದ್ದ ಜಾಗವನ್ನು ಬಿಟ್ಟು ಕದಲುತ್ತಿರಲಿಲ್ಲ. ಮೂರು ನಾಲ್ಕು ದಿನ ಕಳೆಯಿತು. ಆದರೂ ಒಂದು ಬಾರಿ ರೈಲು ನಿಲ್ದಾಣಕ್ಕೆ ಒಂದು ಬಾರಿ ಮನೆಯ ಕಡೆಗೆ ಓಡುತ್ತಲೇ ಇತ್ತು. ಕಡೆಗೆ ಒಂದು ದಿನ ಅನ್ನ. ನೀರಿಲ್ಲದೆ ಆ ನಾಯಿ ಪ್ರಾಣ ಬಿಟ್ಟಿತ್ತು

  

ನಾಯಿಯ ಬಾಲ ನೆಟ್ಟಗಾಗುವುದಿಲ್ಲ ಎಂಬುವ ಮಾತಿದೆ, ಆದರೆ ನಾಯಿಯ ಬಾಲ ಡೊಂಕಿದೆ ಎಂದ ಮಾತ್ರಕ್ಕೆ ಅದರ ಬುದ್ಧಿ ಡೊಂಕು ಇರುವುದಿಲ್ಲ. ನಿಷ್ಠಾವಂತನಾದ ನಾಯಿಯ ಬುದ್ಧಿ ಭ್ರಷ್ಟ ಮನುಷ್ಯನಿಗಿಂತ ಶುದ್ಧ. ನಾಯಿಗಿರುವ ನಿಯತ್ತು ಕೆಲವು ಮನುಷ್ಯರಿಗೆ ಇರಲ್ಲ.

-ಸುಮನಾ ನಾಯಕ್

ಪ್ರಥಮ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top