ಆಳ್ವಾಸ್‌ನಲ್ಲಿ ರಾಷ್ಟ್ರಮಟ್ಟದ 'ಆರ್ಟ್ಸ್ ಎಕ್ಸ್ಯೂಬರೆನ್ಸ್ – 2022'

Upayuktha
0

 

ಮೂಡುಬಿದಿರೆ: ಪರಿಸರದ ನಾಶದಿಂದ ಕಟ್ಟಿದ ಬೃಹತ್‌ ನಗರಗಳು ವಿನಾಶದತ್ತ ಮುಖ ಮಾಡುತ್ತಿವೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕ ಹಾಗೂ ಪರಿಸರವಾದಿ ಸುರೇಶ್ ಹೆಬ್ಳೀಕರ್ ಹೇಳಿದರು.


ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಅಂತರ್‌ ಕಾಲೇಜು ಫೆಸ್ಟ್ ಆರ್ಟ್ಸ್ ಎಕ್ಸ್ಯೂಬರೆನ್ಸ್ - 2022 'ಎನ್‌ವೈಬ್' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, 50 ವರ್ಷದ ಹಿಂದೆ ಪರಿಸರ ರಕ್ಷಣೆಯ ಕುರಿತು ಮಾತನಾಡುವ ಅಗತ್ಯ ಇರಲಿಲ್ಲ. ಕಾರಣ ಅಂದು ಪರಿಸರ ಸಮೃದ್ಧಿಯಿಂದಲೇ ಕೂಡಿತ್ತು. ಆದರೆ ಪ್ರಸ್ತುತ ಅಭಿವೃದ್ಧಿ ನೆಪದಲ್ಲಾದ ಬದಲಾವಣೆ ಪರಿಸರದ ಅವನತಿಗೆ ಕಾರಣವಾಗಿದೆ.


ಪಾಶ್ಚಿಮಾತ್ಯ ದೇಶಗಳಲ್ಲಿ ವೈಜ್ಞಾನಿಕ ಪೂರ್ವಾಲೋಚನೆಯಿಂದ ನಗರಗಳನ್ನು ನಿರ್ಮಿಸಲಾಗಿದೆ. ಆದರೆ ಭಾರತದಲ್ಲಿರುವ ಮೆಟ್ರೋಪಾಲಿಟನ್ ಸಿಟಿಗಳು ವಿಷಕಾರಕ ಗಾಳಿ, ನೀರನ್ನು ಪೂರೈಸುತ್ತಿವೆ. ಬೆಂಗಳೂರಿನಲ್ಲಿ ಕುಡಿಯುವ ನೀರು, ಸೇವಿಸುವ ಆಹಾರದಲ್ಲಿಯೂ ರಾಸಾಯನಿಕ ಅಂಶಗಳು ಸೇರಿಕೊಂಡಿವೆ. 40% ಶೇಕಡಾ ಪಶ್ಚಿಮ ಘಟ್ಟ ಶ್ರೇಣಿಗಳು ನೆಲಸಮವಾಗಿ ಮಾನವಸಂಕುಲದ ನಾಶಕ್ಕೆ ಸ್ವಾಗತಿಸುವಂತಹ ಪರಿಸ್ಥಿತಿ ಉಂಟಾಗಿದೆ.


ಪರಿಸರ ಸಂರಕ್ಷಣೆಯಿಲ್ಲದೇಯಾವುದೇ ನಗರಗಳ ಉಳಿವು ಸಾಧ್ಯವಿಲ್ಲ. ಕೇವಲ 10% ಜೀವವೈವಿಧ್ಯತೆಯನ್ನು ತಿಳಿದ ನಾವುಗಳು ಸಂಪತ್ತಿನ ಬೆನ್ನು ಹತ್ತಿರುವುದು ವಿಪರ್ಯಾಸ. ತಂತ್ರಜ್ಞಾನದ ಮೂಲಕ ಶಕ್ತಿಯನ್ನು ಕ್ರೋಢೀಕರಿಸಲು ಸಾಧ್ಯವಾಗುವ ಮನುಷ್ಯ ಶಕ್ತಿಯ ಮೂಲವಾದ ನೀರಿನ ಒಂದು ಹನಿಯನ್ನೂ ಉತ್ಪಾದಿಸಲು ಶಕ್ತನಲ್ಲಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಮಾನವನ ಜೀವನಕ್ಕೆ ಅಗತ್ಯವಿರುವ ಪರಿಸರವು ಇಂದು ಹಲವು ಕಾರಣಗಳಿಂದ ಅಪಾಯಕ್ಕೆ ಸಿಲುಕಿದೆ. ಮೂಡನಂಬಿಕೆಗಳಿಂದ ಪಕೃತಿಯೊಂದಿಗೆ ಬದುಕನ್ನು ಸಾಗಿಸುವ ಗಿರಿಜನರ ಸಂಸ್ಕೃತಿ, ಆಚರಣೆಗಳು ಅಳಿವಿನಂಚಿನಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ನಿಟ್ಟನಲ್ಲಿ ಆಳ್ವಾಸ್ ಸಂಸ್ಥೆಯು ಕೊರಗರ ವಾದ್ಯ ಪರಿಕರಗಳನ್ನು ಸಂಸ್ಥೆಯ ಕಾರ್ಯಕ್ರಮಗಳಲ್ಲಿ ನುಡಿಸಲು ಪ್ರೋತ್ಸಾಹ ನೀಡುತ್ತಾ ಬಂದಿದೆ.


ಈ ಮೂಲಕ ಸುಮಾರು 50ಕ್ಕೂ ಹೆಚ್ಚಿನ ಗಿರಿಜನ ಪಂಗಡಗಳ ಡೊಳ್ಳು, ಕೊಳಲು, ಹಾಡು ಮುಂತಾದ ಸಾಂಸ್ಕೃತಿಕ ಆಚರಣೆಗಳನ್ನು ಮುಖ್ಯವಾಹಿನಿಗೆ ತರುವ ನಿರಂತರ ಪ್ರಯತ್ನವಾಗುತ್ತಿದೆ. ದೇಶದಲ್ಲಿರುವ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸಿ ಪರಿಸರ ಸಂರಕ್ಷಣೆಯ ಕಾರ್ಯವಾಗಬೇಕೆಂದರು.


ಆಳ್ವಾಸ್ ಪದವಿ ಕಾಲೇಜಿನ ಪ್ರಾಶುಂಪಾಲ ಡಾ.ಕುರಿಯನ್, ಪ್ರಸ್ತುತ ಸಮಾಜದಲ್ಲಿ ಪ್ರಕೃತಿಯೊಂದಿಗೆ ಹೊಂದಿ ಬದುಕಿದವರು ಅನಾಗರಿಕರು, ಪ್ರಕೃತಿಯನ್ನು ಕೊಂದು ಬದುಕುತ್ತಿರುವವರು ನಾಗರಿಕರು ಎಂದು ಕರೆಸಿಕೊಳ್ಳುತ್ತಿರುವುದು ಖೇದಕರ ವಿಷಯ ಎಂದರು.


ಕಾರ್ಯಕ್ರಮದಲ್ಲಿ ಇತ್ತೀಚೆಗೆ ಡಾಕ್ಟ್ರರೇಟ್ ಪದವಿ ಪಡೆದ ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಸವಿತಾ ಗುಂಡ್ಮಿ ಹಾಗೂ ಮಂಗಳೂರಿನ ಪರಿಸರ ಸಂರಕ್ಷಣಾ ಸಾಧಕ ಜೀತ್ ಮಿಲನ್ ರೋಶ್‌ ಅವರನ್ನು ಸನ್ಮಾನಿಸಲಾಯಿತು. ಕೇರಳದ ವಯನಾಡಿನ ಪಣಿಯಾ ಪಂಗಡದ ಕುರಿತು ವಿದ್ಯಾರ್ಥಿಗಳು ನಿರ್ಮಿಸಿದ ಸಾಕ್ಷ್ಯಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. 'ವರ್ಣ ವೈಬ್' ಥೀಮ್‌ನಡಿಯಲ್ಲಿ ಬಿವಿಎ ವಿದ್ಯಾರ್ಥಿಗಳ ವಿವಿಧ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.


ಆಳ್ವಾಸ್ ಪದವಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾಕೆ.ಎಸ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ಮಯ್ಯ, ವಿದ್ಯಾರ್ಥಿ ಸಂಯೋಜಕರಾದ ಪ್ರದೀಶ್ ಹಾಗೂ ಗ್ರೇಶಲ್‌ ಕಳಿಯಾಂಡ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top