ಸಿಎ ವೃತ್ತಿಪರ ಪಠ್ಯಕ್ರಮದ ಕಾರ್ಯಾಗಾರ

Upayuktha
0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ ವೃತ್ತಿಪರ ಪಠ್ಯಕ್ರಮದ ಬಗ್ಗೆ ಕಾರ್ಯಾಗಾರ ನಡೆಯಿತು.


ಬೆಂಗಳೂರಿನ ಇನ್ಫೋಸಿಸ್ ನ ಸಹಾಯಕ ಪ್ರಬಂಧಕರಾದ ಸಿಎ ಕ್ಷಮಾ ಹಾಗೂ ಮಂಗಳೂರಿನ  ಎಂಆರ್‌ಪಿಎಲ್ ಇದರ ಆಂತರಿಕ ಲೆಕ್ಕಪತ್ರ ಪರಿಶೋಧಕ ಕೋಶದ ಪ್ರಬಂಧಕರಾದ ಸಿಎ ಸನತ್ ಇವರು ಸಿ ಎ ಪಠ್ಯಕ್ರಮ, ಇದರ ವಿವಿಧ ಪರೀಕ್ಷೆಗಳ ಹಂತಗಳು, ಪರೀಕ್ಷೆಗೆ ನಡೆಸಬೇಕಾದ ಪೂರ್ವಭಾವಿ ತಯಾರಿ ಬಗ್ಗೆ ಅಲ್ಲದೆ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಇದರೊಂದಿಗೆ ಇತರ ವೃತ್ತಿಪರ  ಪಠ್ಯಕ್ರಮಕ್ಕಿಂತ ಹೇಗೆ ಭಿನ್ನ ಎಂಬುದನ್ನು ತಿಳಿ ಹೇಳಿದರು.


ಕಾಲೇಜಿನ ಪ್ರಾಚಾರ್ಯ ದಿನೇಶ್  ಚೌಟ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಬೇಬಿ ಹಾಗೂ ಉಪನ್ಯಾಸಕಿಯರಾದ ಪ್ರಭಾವತಿ, ಸವಿತಾ ಮತ್ತು ಶೋಭಾ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚರಿತ್ರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top