|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉದಯೋನ್ಮುಖ ಸಾಹಿತಿಗಳ ಚೊಚ್ಚಲ ಕೃತಿಗಳ ಲೋಕಾರ್ಪಣೆ

ಉದಯೋನ್ಮುಖ ಸಾಹಿತಿಗಳ ಚೊಚ್ಚಲ ಕೃತಿಗಳ ಲೋಕಾರ್ಪಣೆ

ಉಜಿರೆ 19: ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕದ ಮೂರನೇ ರಾಜ್ಯ ಅಧಿವೇಶನದಲ್ಲಿ ವಿವಿಧ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಅಖಿಲ ಭಾರತ ಸಾಹಿತ್ಯ ಪರಿಷದ್ ಮಹರಾಷ್ಟ್ರದ ಅಧ್ಯಕ್ಷ ನರೇಂದ್ರ ಪಾಠಕ್ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯ ಜನಜೀವನದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಭಾಷಾವಾದ ಮತ್ತು ಪ್ರಾಂತ್ಯವಾದದ ಹೆಸರಲ್ಲಿ ಸಮಾಜದಲ್ಲಿನ ವೈಷಮ್ಯ ಖೇದಕರ. ರಾಷ್ಟ್ರವನ್ನುಒಗ್ಗೂಡಿಸುವಲ್ಲಿ ಸಾಹಿತ್ಯದ ಪಾತ್ರ ಗಮನಾರ್ಹ ಎಂದರು.


ಸಾಹಿತ್ಯ ಇತಿಹಾಸದಲ್ಲಿ ಮರೆಯಾದ ಅವಿಖ್ಯಾತ ಮಹನೀಯರ ಅನನ್ಯ ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಪುಣ್ಯಕಾರ್ಯವನ್ನು ನಿರ್ವಹಿಸುತ್ತಿವೆ. ಯುವ ಸಮುದಾಯದಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಮೂಲಕ ನಾಗರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಪುಸ್ತಕಗಳು ಅತ್ಯಂತ ಪರಿಣಾಮಕಾರಿಯಾಗಬಲ್ಲವು.


ಕಾರ್ಯಕ್ರಮದಲ್ಲಿ ನುಡಿ ಸ್ವರಾಜ್ಯ, ನುಡಿ ಸಂಪದ ಮತ್ತು ನುಡಿ ಹೆಜ್ಜೆ ಸಂಕಲನ ಕೃತಿಗಳು ಒಳಗೊಂಡಂತೆ ವಿವಿಧ ಉದಯೋನ್ಮುಖ ಲೇಖಕರು ಬರೆದಿರುವ ಚಿನಾಲಿ, ಚಿತ್ತಚಂದ್ರೋದಯ, ಭಾವ ಬೇತಾಳ, ಭಾವ ವಲ್ಲರಿ, ಪ್ರೇರಣಾ, ಸ್ವರಾಜ್ಯ ಕಲಿ ವೆಂಕಟಪ್ಪ ನಾಯಕ ಎಂಬ 9 ಪುಸ್ತಕಗಳು ಲೋಕಾರ್ಪಣೆಗೊಂಡವು.


ಈ ಸಂಧರ್ಭದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷದ್‌ನ ರಾಜ್ಯ ಕಾರ್ಯದರ್ಶಿ ರಘುನಂದನ್ ಭಟ್, ರಾಜ್ಯ ಸಹಕಾರ್ಯದರ್ಶಿ ಕ. ವೆಂ. ನಾಗರಾಜ್, ಸಂಕಲನ ಕೃತಿಗಳ ಸಂಪಾದಕರಾದ ಶ್ರೀಧರ್ ಭಟ್, ಯೋಗೀಶ್‌ ತೀರ್ಥಪುರ, ಡಾ.ವಿಜಯಲಕ್ಷ್ಮಿ ಸೇರಿದಂತೆ ಬಿಡುಗಡೆಗೊಂಡ ಪುಸ್ತಕಗಳ ಲೇಖಕರಾದ ಅಜಯ ಭಾರತೀಯ, ಸೀತಾ ಹೆಗಡೆ, ವಿದ್ಯಾಶ್ರೀ ಅಡೂರು, ಸುಭಾಷಿಣಿ, ಚಿನ್ಮಯಉವಾತಿ, ಸುಜಾತಾ ಹೆಗಡೆ ಕಾಗಾರಕೊಡ್ಲು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ತಿಮ್ಮಣ್ಣ ಭಟ್‌ ಕಾರ್ಯಕ್ರಮವನ್ನು ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post