ಮಂಗಳೂರು: ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಬಾರೆಬೈಲ್ ಇದರ ವಾರ್ಷಿಕೋತ್ಸವದ ಅಂಗವಾಗಿ ವೆನ್ಲಾಕ್ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ನಗರದ ಕೆಪಿಟಿಯ ಬಾರೇಬೈಲ್ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಎನ್ ಜಿ ಮೂಲ್ಯ ಹೊಸಬೆಟ್ಟು ಮತ್ತು ಸಚ್ಚಿದಾನಂದ ಬಂಜನ್ ಬಾರೆಬೈಲು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು.
ಸಂಚಾಲಕರಾದ ಡಾ. ಯತೀಶ್ ಕುಮಾರ್, ರವಿಚಂದ್ರ ಕೋಟೆಕಾರ್ ಶಿಬಿರದ ಉಸ್ತುವಾರಿ ವಹಿಸಿಕೊಂಡರು. ಪೊವಪ್ಪ ಕಡಂಬಾರ್ ಕೋಳ್ಯೂರು ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿಗಳಾದ ವೆಂಕಪ್ಪ ಎಂ ಬಂಜನ್ ಕುಂಪಲ , ಆನಂದ್ ಬಂಜನ್ ಅಡ್ಯಾರ್, ಬ್ಲಡ್ ಬ್ಯಾಂಕ್‌ನ ವೈದ್ಯರು ಮತ್ತು ಇತರರು ಉಪಸ್ಥಿತರಿದ್ದರು. ಸುಮಾರು 41 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ