ಮೂಡುಬಿದಿರೆ: ವೇಗಪರ ಜಗದಲಿ ವಿದ್ಯಾರ್ಥಿಗಳು ಕಾಲಕ್ಕನುಗುಣವಾದ ಹೊಸ ವಿಚಾರವನ್ನು ಕಲಿಯಬೇಕು ಎಂದು ಆಳ್ವಾಸ್ ಕಾಲೇಜಿನ ಪದವಿ ವಿಭಾಗದ ಕನ್ನಡ ಉಪನ್ಯಾಸಕ ಹರೀಶ್ ಟಿ. ಜಿ. ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ 'ಅಭಿವ್ಯಕ್ತಿ' ಫೋರಂ ಉದ್ಘಾಟಿಸಿದ ಅವರು ಅಭಿವ್ಯಕ್ತಿ ಎಂಬುವುದು ಸುಪ್ತ ಪ್ರಜ್ಞೆಯಲ್ಲಿದ್ದು ಒಮ್ಮೆಗೇ ಸ್ಪುಟವಾಗುವ ಬಗೆ. ಪ್ರಜ್ಞೆಗೆ ಹೊಸತನ್ನು ಹೊಳೆಯಿಸುವುದೇ ಪ್ರತಿಭೆ. ಈ ಪ್ರತಿಭೆಯೇ ಅಭಿವ್ಯಕ್ತಿಯ ಕ್ರಮವೆಂದು ಹೇಳಿದ ಇವರು ಪ್ರಜ್ಞೆಗೆ ಎರಡು ವಿಧ ಒಂದು ಬುದ್ಧಿಪೂರ್ವಕ ಮತ್ತೊಂದು ಭಾವ ಗೋಚರ, ಭಾವ ಗೋಚರ ಯಾವಾಗಲೂ ತರ್ಕಕ್ಕೆ ನಿಲುಕದ್ದು ಮತ್ತು ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಭಾಷೆಯ ಪರಿಣಾಮಕವಾದ ಬಳಕೆ ಬಹಳ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ,ಅಭಿವ್ಯಕ್ತಿ ಫೋರಂನ ವಿದ್ಯಾರ್ಥಿ ಸಂಯೋಜಕಿ ಕೀರ್ತನ ಶೆಟ್ಟಿ, ಸಹ ಸಂಯೋಜಕ ಆನಂದ್ ಜೇವೂರ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ಶ್ರೀನಿವಾಸ್ ಹೊಡೆಯಾಲ, ಡಾ. ಸಫಿಯಾ, ಅಕ್ಷಯ್, ನಿಶಾನ್, ಸುಶ್ಮಿತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪವಿತ್ರ ಸ್ವಾಗತಿಸಿದರೆ, ದುರ್ಗಾಪ್ರಸನ್ನ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ