ಉಜಿರೆ: 18 ಕಾರ್ ಬಟಾಲಿಯನ್ ಎನ್. ಸಿ. ಸಿ ಸಹಯೋಗದೊಂದಿಗೆ ಉಜಿರೆಯ ಶ್ರೀ.ಧ.ಮಕಾಲೇಜಿನ ನೇತೃತ್ವದಲ್ಲಿ ಎನ್.ಸಿ.ಸಿ ಆರ್ಮಿ ಕೆಡೆಟ್ಸ್ ಗಳಿಗೆ ಫೈಯರಿಂಗ್ ಶಿಬಿರವು ಅಜ್ಜರಕಲ್ಲು ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಪಿ ಐ ಸ್ಟಾಫ್ ಸುಬೆದಾರ್ ಸಂದೀಪ್ ಫೈಯರಿಂಗ್ ಕುರಿತು ಮಾಹಿತಿಯನ್ನು ನೀಡಿದರು. ಶ್ರೀ.ಧ.ಮ ಪದವಿ ಕಾಲೇಜು, ಅನುದಾನಿತ ಪ್ರೌಢ ಶಾಲೆ ಉಜಿರೆ , ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಸ.ಹಿ.ಪ್ರಾ ಶಾಲೆ ಪುಂಜಲಕಟ್ಟೆಯ ಒಟ್ಟು 220 ಕೆಡೆಟ್ಸ್ ಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಪೋಲೀಸ್ ಅನುಮತಿಯೊಂದಿಗೆ ಶಿಬಿರವು ನಡೆಯಿತು. ಇದರಲ್ಲಿ ಸಿ.ಒ ಆದ ಕರ್ನಲ್ ಎನ್ಆರ್ ಬೀಡೆ , ಎಸ್ ಡಿ ಎಂ ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್ ಹಾಗೂ ಲೆಫ್ಟಿನೆಂಟ್ ಶುಭಾರಾಣಿ, ಮಡಂತ್ಯಾರ್ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಆಲ್ವಿನ್ ಹಾಗೂ ಇನ್ನಿತರ ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ