ಶ್ರೀ ಮಧ್ವನವಮಿ ಅಂಗವಾಗಿ ಸಾಧಕರಿಗೆ ‘ಶ್ರೀಮಧ್ವೇಶಾನುಗ್ರಹ’ ಪ್ರಶಸ್ತಿ ಪ್ರದಾನ

Upayuktha
0

ಆಯೋಜನೆ: ವಿಶ್ವ ಮಧ್ವಮತ ವೆಲ್‍ಫೇರ್ ಅಸೋಸಿಯೇಷನ್


ಬೆಂಗಳೂರು: ಆಚಾರ್ಯ ಪುರುಷರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದವರು ಅಚಾರ್ಯ ಶಂಕರ, ರಾಮಾನುಜ ಮತ್ತು ಮಧ್ವರು. ವಿಶ್ವಮಾನ್ಯವಾದ ಸಂದೇಶ ಹೊತ್ತು ಬಂದ ಈ ಮೂವರಲ್ಲಿ  ಮಧ್ವರು ಕನ್ನಡದ ಕೊಡುಗೆಯೆಂಬುದು ಹೆಮ್ಮೆಯ ಸಂಗತಿ, ಅವರ ಚಿಂತನೆಗಳು ಬೋಧಪ್ರದ. ತಮ್ಮ ಇನ್ನೊಂದು ಪ್ರತಿಕೃತಿಯಂತಿರುವ ದಿವ್ಯಜ್ಞಾನ ಸಂಪತ್ತನ್ನು ಸಜ್ಜನರ ವಿನಿಯೋಗಕ್ಕೆ ನೀಡಿದ ಈ ಮಹಿಮರು ಜ್ಞಾನಬಲದೈಸಿರಿಗಳ ಅದ್ಭುತ ಸಂಗಮ. ಭಕ್ತಿಪಂಥ ಪ್ರವರ್ತಕ ಮನೀಷಿಗಳು. ಅವರ ತತ್ವವಾದವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದೇ ವಿಚಾರ ಪ್ರಿಯರು ಮಧ್ವರಿಗೆ ಸಲ್ಲಿಸಬಹುದಾದ ಗೌರವ ಎಂದು ಸಂಸ್ಕøತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.


ವಿಶ್ವ ಮಧ್ವಮತ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ನಗರದ ವಿದ್ಯಾರಣ್ಯಪುರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಧ್ವ ನವಮಿಯ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್, ಶ್ರೀ ಜಗನ್ನಾಥ ದಾಸರು ಚಲನಚಿತ್ರದ ನಿರ್ದೇಶಕ ಡಾ.ಮಧುಸೂದನ ಹವಲ್ದಾರ್ ಹಾಗೂ ಗೋಪಾಲದಾಸರ ಪಾತ್ರಧಾರಿ ಪ್ರಭಂಜನ ದೇಶಪಾಂಡೆ ಮೊದಲಾದ ಸಾಧಕರಿಗೆ ‘ಶ್ರೀಮಧ್ವೇಶಾನುಗ್ರಹ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.


ವಿಎಂಡ್ಲ್ಯೂಎ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ವೆಂಕೋಬ ರಾವ್ ಪ್ರಾಸ್ತಾವಿಕ ಮಾತನಾಡುತ್ತ ಕನ್ನಡನಾಡಿನ ಹೆಮ್ಮೆಯ ಆಚಾರ್ಯರಾದ ವಿಶ್ವಗುರು ಮಧ್ವಾಚಾರ್ಯರ ಸಂದೇಶದ ಪ್ರಸಾರ ತನ್ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕೈಂಕರ್ಯ ಮಾಡುತ್ತಿರುವ ವಿಎಂಡ್ಲ್ಯೂಎ ವತಿಯಿಂದ  ಈ ಸಮಾರಂಭ ನಡೆದಿದ್ದು ಆಚಾರ್ಯರ ಪೂರ್ವಾವತಾರವಾದ ಭೀಮಸೇನ ಮತ್ತು ಹನುಮಂತನ ಸ್ಮರಣಾರ್ಥ ಅಡುಗೆಯವರು ಮತ್ತು ಸಹಾಯಕ ಅರ್ಚಕರನ್ನೂ ಗೌರವಿಸುತ್ತಿದ್ದೇವೆ ಎಂದು ತಿಳಿಸಿದರು.


ಪೂಜ್ಯ ಶ್ರೀಮಧ್ವರಾಜ ತೀರ್ಥರ ದಿವ್ಯ ಸಾನ್ನಿಧ್ಯದಲ್ಲಿ ವಿದ್ವಾನ್ ಜಿ .ಪಿ. ನಾಗರಾಜಾಚಾರ್ಯ ಉಪನ್ಯಾಸ ನೀಡಿದರು. ಕೃಷ್ಣಾಚಾರ್ಯ, ರಾಘವೇಂದ್ರ ಜೋಷಿ, ಶ್ರೀಮಠದ ಬದರಿ ಇನ್ನಿತರರು ಉಪಸ್ಥಿತರಿದ್ದರು. 

ವಿವರಗಳಿಗೆ: 91138 53325


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top