ಉಜಿರೆ: ಸ್ಮರಣಶಕ್ತಿಯ ಕಾರ್ಯಾಗಾರ

Upayuktha
0

ಉಜಿರೆ: ವಿದ್ಯಾರ್ಥಿಗಳು ವಿದ್ಯಾವಂತರು ಆಗುವುದರೊಂದಿಗೆ ಸಂಸ್ಕಾರವಂತರಾಗಬೇಕು. ವಿದ್ಯೆಯು ಬದುಕಿಗೆ ಅನ್ನವನ್ನು ನೀಡಿದರೆ, ಸಂಸ್ಕಾರವು ಬದುಕಿಗೆ ಅರ್ಥವನ್ನು ನೀಡುತ್ತದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಬರುವ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹಾಗೆಯೇ ಮಾನಸಿಕ ಹಾಗೂ ದೈಹಿಕ ಆರೋಗ್ಯ ಅಗತ್ಯ. ಇದನ್ನು ಆಹಾರ ಸೇವನೆ, ಧ್ಯಾನಗಳಿಂದ ಸಾಧಿಸಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಹೇಳಿದರು.  


ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಅಂತರಾಧ್ಯಯನ ವೃತ್ತಂ ಇದರ ವತಿಯಿಂದ ಆಯೋಜಿಸಿದ ಮೆದುಳಿಗೆ ಮೇವು ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು. 


ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ ಶುಭಹಾರೈಸಿದರು. ಯಶಸ್ ಎ.ಯು ಸ್ವಾಗತಿಸಿ, ಐಶ್ವರ್ಯಾ ವಂದಿಸಿದರು. ಸಂಸ್ಕೃತ ಅಂತರಾಧ್ಯಯನ ವೃತ್ತಂ  ಇದರ ಸಂಯೋಜಕಿ ಧನ್ಯಾ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top