ವಿಶ್ವನಾಥ್ ಅವರಿಗೆ ಡಾಕ್ಟರೇಟ್

Upayuktha
0

 


ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ವಿಶ್ವನಾಥ ಜೆ ಎಸ್ ಅವರು ಅದೇ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಪೈ ಪಿ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'ಸರ್ಫೇಸ್ ರಫ್ನೆಸ್ ಇವಾಲ್ಯೂಯೇಷನ್ ಇನ್ ಟೈಟಾನಿಯಂ ಬೇಸ್ಡ್ ಅಲಾಯ್ಸ್ ಯೂಸಿಂಗ್ ಮಷೀನ್ ವಿಷನ್' ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಘೋ‍ಷಿಸಿದೆ. ಇವರು ದಾವಣಗೆರೆ ಜಿಲ್ಲೆಯ ಜಂಪೇನಹಳ್ಳಿ ಗ್ರಾಮದ ನಿವಾಸಿಯಾದ ಶ್ರೀ ಶೇಖರನಾಯ್ಕ್ ಮತ್ತು ಶ್ರೀಮತಿ ಶಾಂತಮ್ಮ ಅವರ ಪುತ್ರ.

إرسال تعليق

0 تعليقات
إرسال تعليق (0)
To Top