ಮೂಡುಬಿದಿರೆ: ಇಡೀ ಜಗತ್ತನ್ನು ಏಕೀಕರಣಗೊಳಿಸುವ ಶಕ್ತಿ ಸಂಸ್ಕೃತ ಭಾಷೆಗಿದೆ ಎಂದು ಶ್ರೀ ಕಟೀಲ್ ದುರ್ಗಾಪರಮೇಶ್ವರಿ ಸಂಸ್ಕೃತ್ ಪಿಜಿ ಸೆಂಟರ್‌ನ ಪ್ರಾಂಶುಪಾಲ ಡಾ ಪದ್ಮನಾಭ ಮರಾಠೆ ಹೇಳಿದರು.
ಆಳ್ವಾಸ್ ಪ್ರೌಢಶಾಲೆಯ ಆವರಣದಲ್ಲಿ ಸಂಸ್ಕೃತ ವಿಭಾಗದಿಂದ ಆಯೋಜಿಸಿದ್ದ 'ಸಂಸ್ಕೃತೋತ್ಸವ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಾ ಭಾಷೆಗಳು ನಮಗೆ ಅವಶ್ಯ. ಯಾವ ಭಾಷೆಯು ಕೀಳು ಅಲ್ಲ. ಯಾವ ಭಾಷೆಯು ಕಷ್ಟಕರ ಅಲ್ಲ. ಅಭ್ಯಸಿಸುತ್ತಾ ಹೋದಂತೆಲ್ಲಾ ಭಾಷೆಯು ಸುಲಭವಾಗುತ್ತಾ ಹೋಗುತ್ತದೆ. ಸಂಸ್ಕೃತ ಆತ್ಮ ವಿಕಾಸದ ಭಾಷೆಯಾಗಿದ್ದು, ಈ ಭಾಷೆಯ ನಿತ್ಯ ಪಠಣದಿಂದ ಹತ್ತು ಹಲವು ಉಪಯೋಗಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಸಿ.ಬಿ.ಎಸ್.ಇ ಶಾಲೆಯ ಮುಖ್ಯೋಪಾದ್ಯಾಯ ಮಹಮ್ಮದ್ ಶಫೀಷೇಕ್, ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಉಮಾ ರೂಫಸ್, ಆಳ್ವಾಸ್ ಪ್ರೌಢ ಶಾಲಾ ಉಪಮುಖ್ಯೋಪಾಧ್ಯಾಯಿನಿ ಶೋಭಲತಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಸಂಸ್ಕೃತದ ಹಾಡು, ನೃತ್ಯ, ಪ್ರಹಸನ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಮೃತ ಕೆ ಭಟ್ ಬಳಗ ಪ್ರಾರ್ಥಿಸಿ, ವಂದನ ವಂದಿಸಿದರು. ಸಮನ್ವಿತಾ, ಪ್ರತೀಕ್ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ