ಪರಿಚಯ: ಚಿತ್ರಕಲಾ ಕ್ಷೇತ್ರದಲ್ಲಿ ದೀಪಕ್ ಆಚಾರ್ಯ ಇವರ ಕೈ ಚಳಕ

Upayuktha
0

ಪ್ರತಿಯೊಬ್ಬ ವ್ಯಕ್ತಿಯೂ ತಾನೊಬ್ಬ ಸಮಾಜ ಗುರುತಿಸುವಂತಹ ವ್ಯಕ್ತಿಯಾಗಬೇಕು ಎಂಬ ಅಭಿಲಾಷೆಯನ್ನು ಹೊಂದಿರುತ್ತಾರೆ. ತಮ್ಮ ಅಭಿಲಾಷೆಯನ್ನು ಈಡೇರಿಸುವ ಸಲುವಾಗಿ ಹಲವು ಪ್ರಯತ್ನಗಳನ್ನೂ ನಡೆಸುತ್ತಾರೆ. ತನ್ನ ಕನಸಿಗೆ ಇತರರನ್ನು ಬೆನ್ನೆಲುಬಾಗಿಸಿಕೊಂಡು ಸಾಧನೆಯ ಮೆಟ್ಟಿಲೇರುತ್ತಾರೆ. ಆದರೆ ಇಲ್ಲೊಬ್ಬರು ತನ್ನ ಕನಸನ್ನು ತನ್ನ ಸ್ವ ಪ್ರಯತ್ನದಿಂದ ನನಸಾಗಿಸಿಕೊಂಡಿದ್ದಾರೆ.


ಬಾಲ್ಯದಲ್ಲೇ ತಾನೊಬ್ಬ ಚಿತ್ರಕಲಾವಿದನಾಗಬೇಕು ಎಂಬ ಮಹದಾಸೆಯನ್ನು ಹೊಂದಿ, ಅದನ್ನು ತನ್ನ ಸತತ ಪ್ರಯತ್ನದಿಂದ ಈಡೇರಿಸಿಕೊಂಡವರು ಉಡುಪಿಯ ದೀಪಕ್ ಆಚಾರ್ಯ. ಚಿತ್ರಕಲೆಯಲ್ಲಿ ಅವರ ವಿಶೇಷ ಪರಿಣತಿ ಎಂದರೆ ಪೆನ್ಸಿಲ್ ಚಿತ್ರಕಲೆ.


ಯಾವುದೇ ಕಲಾತರಗತಿಗೆ ಹಾಜರಾಗದೆ ತನ್ನ ಕಲ್ಪನೆಯ ಮೂಲಕವೇ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿ ಇಂದು ಹಲವು ವಿಧಗಳಲ್ಲಿ ಚಿತ್ರಕಲೆ ಮೂಡಿಸುವ ಇವರು ಮೂಲತಃ ಉಡುಪಿ ಜಿಲ್ಲೆಯ ಈಶ್ವರನಗರ್ ನಿವಾಸಿ ಗಂಗಾಧರ ಆಚಾರ್ಯ ಮತ್ತು ಪ್ರೇಮ ದಂಪತಿಗಳ ಪುತ್ರ.


ಪ್ರಸ್ತುತ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ದೀಪಕ್ ಕ್ರೀಡಾಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ. 2019-20ರಲ್ಲಿ ರಾಕ್ ಬಾಲ್ ಅಮೆಚೂರ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ವಾಲಿಬಾಲ್ ಪಂದ್ಯಾಟದಲ್ಲಿ ಕನಾ೯ಟಕ ರಾಜ್ಯವನ್ನು ಪ್ರತಿನಿಧಿಸಿ, ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. 2020-21ನೇ ಸಾಲಿನಲ್ಲಿ ಇದೇ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ವಾಲಿಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

      

ಉಡುಪಿಯ ಗರಡಿಮಜಲು ಪ್ರಾಥಮಿಕ ಶಾಲೆಯಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಆದಿ ಉಡುಪಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಉಡುಪಿಯ ಶ್ಯಾಮಿಲಿ ಪದವಿಪೂರ್ವ ಕಾಲೇಜು ಕಿದಿಯೂರು ಇಲ್ಲಿ ಪಡೆದುಕೊಂಡು ಮುಂದಿನ ಉನ್ನತ ಶಿಕ್ಷಣವನ್ನು YIT ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದರು.

   

ಕೊರೋನ ಸಾಂಕ್ರಾಮಿಕ ರೋಗ ವ್ಯಾಪಿಸಿದ ಬಳಿಕ ಯೂಟ್ಯೂಬ್ ಚಾನೆಲ್ ನ ಉಪಯೋಗದಿಂದ  ಚಿತ್ರಕಲೆಯ ಒಲವನ್ನು ಬಲಪಡಿಸಿಕೊಂಡರು. ತನ್ನ ಕಲ್ಪನೆಯ ಕೂಸಿಗೆ ಬಣ್ಣ ಹಚ್ಚಿದ ಇವರ ಶ್ರಮ ಉತ್ತುಂಗಕ್ಕೆ ಏರಲಿ ಎಂದು ಆಶಿಸೋಣ.

 -ಸರೋಜ ಪಿ ಜೆ ನೆಲ್ಯಾಡಿ

ತೃತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top