ವಿವೇಕಾನಂದ ಕಾಲೇಜಿನ ನಾರಾಯಣ ಕುಂಬ್ರರವರಿಗೆ ಚಂದನ ಸಾಹಿತ್ಯ ಸಿಂಧು ಪ್ರಶಸ್ತಿ

Upayuktha
0

 

ಸುಳ್ಯ: ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ಸಾಹಿತಿ, ಜ್ಯೋತಿಷಿ, ಸಂಘಟಕ, ಗಾಯಕ, ನಟ, ನಿರ್ದೇಶಕರು ಆದ ಎಚ್. ಭೀಮರಾವ್ ವಾಷ್ಟರ್ ರವರ 46ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ - 2022 ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಫೆಬ್ರವರಿ 20ರಂದು ನಡೆಯಿತು.


ರಾಜ್ಯಮಟ್ಟದ ಚಂದನ ಕವಿಗೋಷ್ಠಿ, ಮೂರು ಕೃತಿಗಳ ಬಿಡುಗಡೆ, ಚಂದನ ಸೌರಭ ಪ್ರಶಸ್ತಿ, ಚಂದನ ಕವಿ ಕಾವ್ಯ ಗೋಷ್ಠಿ, ಸಾಧಕರಿಗೆ 2022 ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದಲ್ಲಿ ಲ್ಯಾಬ್ ಸಹಾಯಕರು ಆಗಿರುವ ನಾರಾಯಣ ಕುಂಬ್ರರವರಿಗೆ ಕೆಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಚಂದನ ಸಾಹಿತ್ಯ ಸಿಂಧು ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳು ಆದ ಶ್ರೀ ನಾರಾಯಣ ರೈ ಕುಕ್ಕುವಳ್ಳಿಯವರು ನೀಡಿ ಗೌರವಿಸಿದರು.


ಸಾಹಿತ್ಯದಲ್ಲಿ ಅಪಾರ ಒಲವನ್ನು ಹೊಂದಿರುವ ನಾರಾಯಣ ಕುಂಬ್ರ, ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದ್ದಾರೆ. ಅನೇಕ ಸಾಹಿತ್ಯ ಬಳಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಪುರಸ್ಕಾರವು ಇವರ ಸಾಹಿತ್ಯ ಸಾಧನೆಗೆ ಸೂಕ್ತವಾಗಿ ಸಂದಂತಾಗಿದೆ.


ವೇದಿಕೆಯಲ್ಲಿ ಚಂದನ ಸಾಹಿತ್ಯ ವೇದಿಕೆಯ ಸ್ಥಾಪಕಾಧ್ಯಕ್ಷರು ಎಚ್. ಭೀಮರಾವ್ ವಾಷ್ಟರ್, ಮೋಹನ್ ನಂಗಾರು, ಡಾ. ಹಾಜಿ ಅಬೂಬಕ್ಕರ್ ಆರ್ಲಪದವು, ಎಂ. ಬಿ. ಸಂತೋಷ್ ಮೈಸೂರು ಸಾಹಿತಿಗಳು ಮತ್ತು ಕವಿ ವೈಲೇಶ್. ಪಿ. ಎಸ್. ಕೊಡಗು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top