ನಮ್ಮ ಅಬ್ಬಕ್ಕ 2022: ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha
0

ಮಂಗಳೂರು: ಮಹಾನಗರ ಪಾಲಿಕೆ ಮತ್ತು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ಫೆಬ್ರವರಿ 26 ಮತ್ತು 27ರಂದು ನಗರದ ಪುರಭವನದಲ್ಲಿ ನಡೆಯುವ 'ನಮ್ಮ ಅಬ್ಬಕ್ಕ- 2022: ಅಮೃತ ಸ್ವಾತಂತ್ರ್ಯ ಸಂಭ್ರಮ'ದ ಆಮಂತ್ರಣ ಪತ್ರಿಕೆ ಎಂ.ಜಿ.ರಸ್ತೆಯ 'ಶಿವಾರ್ಪಣಂ' ಗೃಹ ಕಚೇರಿಯಲ್ಲಿ ಸೋಮವಾರ ಬಿಡುಗಡೆಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಕರೆಯೋಲೆ ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ ಸಂಘಟನಾ ಸಮಿತಿಯ ಪದಾಧಿಕಾರಿಗಳಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ತೋನ್ಸೆ ಪುಷ್ಕಳ ಕುಮಾರ್, ಪಿ.ಡಿ. ಶೆಟ್ಟಿ, ತ್ಯಾಗಂ ಹರೇಕಳ, ಲೋಕನಾಥ ರೈ ಕೆ‌., ವಾಮನ್ ಬಿ. ಮೈಂದನ್, ತುಕಾರಾಮ ನಾಯಕ್, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸತೀಶ್ ಸುರತ್ಕಲ್, ವಿಕ್ರಂ ದತ್ತ, ಮೋಹನ್ ದಾಸ ರೈ, ಎ.ಪಿ.ರೈ, ನಮಿತಾ ಶ್ಯಾಂ, ಸುಮಾ ಪ್ರಸಾದ್, ಗೀತಾ ಜೆ.ಸಲ್ದಾನ, ವಿಜಯಲಕ್ಷ್ಮಿ ಕಟೀಲು, ಪ್ರತಿಮಾ ಹೆಬ್ಬಾರ್, ವಿನುತಾ ನಾಯಕ್ ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



free website counter

Post a Comment

0 Comments
Post a Comment (0)
To Top