ಕಾರಿಂಜ ಕ್ಷೇತ್ರ: 27ರಿಂದ ಜಾತ್ರಾ ಮಹೋತ್ಸವ

Upayuktha
0

ಕಾರಿಂಜೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಉತ್ಸವ (ಫೈಲ್‌ ಫೋಟೋ)


ಬಂಟ್ವಾಳ: ಇಲ್ಲಿನ ಪುರಾತನ ಪ್ರಸಿದ್ಧ ಕಾರಿಂಜ ಕ್ಷೇತ್ರ ಮಹತೋಭಾರ ಪಾರ್ವತೀ- ಶಿವಾಲಯದಲ್ಲಿ ಇದೇ 27ರಿಂದ ಮಾ.5 ರತನಕ ಮಹಾ ಶಿವರಾತ್ರಿ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.

 

27ರಂದು ಸಂಜೆ ಸ್ಥಳೀಯ ನಾಲ್ಕು ಗ್ರಾಮಗಳಿಂದ ಹೊರೆಕಾಣಿಕೆ ಮೆರವಣಿಗೆ, 28ರಂದು ಬೆಳಿಗ್ಗೆ 8 ಗಂಟೆಗೆ ಗಣಯಾಗ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ನಿತ್ಯ ಉತ್ಸವ ನಡೆಯಲಿದೆ. ಮಾ.1ರಂದು ಮಹಾಶಿವರಾತ್ರಿ ಉತ್ಸವ, ತುಲಾಭಾರ ಸೇವೆ, ಯಕ್ಷಗಾನ ತಾಳಮದ್ದಳೆ, ಶತರುದ್ರಾಭಿಷೇಕ, ಮಾ. 2ರಂದು ಪಾರ್ವತಿ ಸನ್ನಿಧಿಯಲ್ಲಿ ದೇವರ ದರ್ಶನ ಬಲಿ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಲಾ ವೈಭವ, ರಾತ್ರಿ 9 ಗಂಟೆಗೆ ಭಕ್ತಿ ಸಂಗೀತ ರಸಮಂಜರಿ, ರಾತ್ರಿ 12 ಗಂಟೆಗೆ ಪಾರ್ವತೀ-ಪರಮೇಶ್ವರ ಭೇಟಿ ಸಹಿತ ಚಂದ್ರ ಮಂಡಲ ಉತ್ಸವ ನಡೆಯಲಿದೆ.


ಮಾ.3ರಂದು ಮಹಾ ರಥೋತ್ಸವ , ಮಾ.4ರಂದು ಬೆಳಿಗ್ಗೆ 8 ಗಂಟೆಗೆ ದೇವರ ದರ್ಶನ ಬಲಿ, ಸಂಜೆ 6 ಗಂಟೆಗೆ ಯಕ್ಷಗಾನ ತಾಳಮದ್ದಳೆ, ರಾತ್ರಿ 11 ಗಂಟೆಗೆ ಪಾರ್ವತೀ-ಪರಮೇಶ್ವರ ಭೇಟಿ, ಕಟ್ಟೆ ಪೂಜೆ ಉತ್ಸವ, ಮಾ.5ರಂದು ದೈವಗಳಿಗೆ ನೇಮೋತ್ಸವ ನಡೆಯಲಿದ್ದು, ಪ್ರತಿದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


free counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top