'ಕೋವಿಡ್ 2021 - ಯಾರಿಗುಂಟು, ಯಾರಿಗಿಲ್ಲ' ಕಿರುಚಿತ್ರ ಬಿಡುಗಡೆ

Upayuktha
0

ಸಿನೆಮಾ ಪ್ರೇಕ್ಷಕನ ಸೊತ್ತು: ಸೂರ್ಯನಾರಯಣ ಭಟ್


ಉಜಿರೆ: ಸಿನೆಮಾ ಒಂದು ಪ್ರಬಲ ಮಾಧ್ಯಮ, ಸಿನೆಮಾದ ಕಲಿಕೆ ಹಾಗು ಪ್ರಯೋಗಗಳು ಜವಬ್ದಾರಿಯುತವಾದದ್ದು, ವಿದ್ಯಾರ್ಥಿಗಳು ಈ ಹಿನ್ನಲೆಯಲ್ಲಿ ಸಿನೆಮಾದ ಕಲಿಕೆಯನ್ನು ಬಹಳ ಸೂಕ್ಷ್ಮದಿಂದ ಮಾಡಬೇಕು, ಎಂದು ಎಸ್.ಡಿ.ಎಂ ಕಾಲೇಜಿನ ಆಂಗ್ಲ ಭಾಷ ಪ್ರಾಧ್ಯಾಪಕ ಸೂರ್ಯನಾರಯಣ ಭಟ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಅವರು ಇತ್ತೀಚೆಗೆ ಎಸ್.ಡಿ.ಎಂ ಕಾಲೇಜಿನ ಬಿವೋಕ್ ನ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮಂ ಮೇಕಿಂಗ್ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಗಳು ನಿರ್ಮಿಸಿದ 'ಕೋವಿಡ್ 2021 - ಯಾರಿಗುಂಟು, ಯಾರಿಗಿಲ್ಲ' ಕಿರುಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಸಿನೆಮಾ ಪ್ರೇಕ್ಷರಕರ ಕೈಗೆ ತಲುಪುವಲ್ಲಿವರೆಗೆ ಮಾತ್ರ ಅದು ನಿರ್ದೇಶಕನ ಸೊತ್ತಾಗಿರುತ್ತೆ, ಆಮೇಲೆ ಅದು ಪ್ರೇಕ್ಷನ ಸೊತ್ತಾಗುತ್ತದೆ. ಹಾಗಾಗಿ ಪ್ರೇಕ್ಷಕನ ದೃಷ್ಟಿಯನ್ನು ಇಟ್ಟುಕೊಂಡು ಚಿತ್ರ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು ನಿರ್ಮಿಸಿದ ಕಿರುಚಿತ್ರಕ್ಕೆ ಶುಭಹಾರೈಸಿದರು.


ವೇದಿಕೆಯಲ್ಲಿ ಚಿತ್ರದ ನಿರ್ದೇಶಕ ಮಂಜುನಾಥ್‌ ಎಲ್, ಉಪಸ್ಥಿತರಿದ್ದರು, ಚಿತ್ರದಲ್ಲಿ ಕೆಲಸ ಮಾಡಿದ ವಿದ್ಯಾರ್ಥಿಗಳು ಈ ಸಂದರ್ಬದಲ್ಲಿ ಚಿತ್ರನಿರ್ಮಾಣದ ತಮ್ಮ ಅನುಭವ ಹಂಚಿಕೊಂಡರು.


ಸಮಾರಂಭದ ಕೊನೆಯಲ್ಲಿ ಚಿತ್ರವನ್ನು ನರೆದಿದ್ದ ಪ್ರೇಕ್ಷಕರಿಗೆ ಪ್ರದರ್ಶಿಸಲಾಯಿತು, ಈ ಸಂಧರ್ಬದಲ್ಲಿ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮಂ ಮೇಕಿಂಗ್ ವಿಭಾಗದ ಸಂಯೋಜಕರಾದ ಸುವೀರ್‌ ಜೈನ್‌ ಉಪನ್ಯಾಸಕರಾದ ಮಾಧವಹೊಳ್ಳ, ಅಶ್ವಿನಿ ಜೈನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನು ಶ್ರೀ ಕಾರ್ಯಕ್ರಮ ನಿರೂಪಸಿದರು.


ಕಿರುಚಿತ್ರವನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು.



ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



free website counter

Post a Comment

0 Comments
Post a Comment (0)
To Top