ಪುಸ್ತಕ ಪ್ರೀತಿ: ಸ್ವಪ್ನ ವಾಸ್ತವ- ಪ್ರೀತಿಯ ಅನಾವರಣ

Upayuktha
0


ಕಾದಂಬರಿಯ ಶೀರ್ಷಿಕೆ: ಸ್ವಪ್ನ ವಾಸ್ತವ

ಲೇಖಕಿ: ಕು. ಚಂದ್ರಿಕಾ 


ಒಂದು ಪ್ರೀತಿ ಶುರುವಾಗಲು ಎಷ್ಟೋ ವರ್ಷಗಳು ಬೇಕಾದೀತು. ಅದೇ ಪ್ರೀತಿ ಮುರಿಯಲು ಒಂದು ಸೆಕೆಂಡ್ ಸಾಕು. ಪ್ರೀತಿಯ ಬೆಲೆ ಗೊತ್ತಿರುವರು, ಪ್ರೀತಿಯನ್ನು ಅರ್ಥಮಾಡಿಕೊಂಡವರು ಅದನ್ನು ಅಷ್ಟೇ ಜೋಪಾನವಾಗಿ ಕಾಳಜಿ ವಹಿಸುತ್ತಾ ಹೋಗುತ್ತಾರೆ. ಇಲ್ಲದಿದ್ದರೆ ಆ ಪ್ರೇಮ ಯಾವಗ ಕೊನೆ ಯಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಹಾಗೆಯೇ ಸ್ವಪ್ನ ವಾಸ್ತವ ಕಾದಂಬರಿಯಲ್ಲಿ ಕಾಲೇಜು ದಿನದದಿಂದ ಶುರುವಾದ ಕತೆಗಳು ಪ್ರೇಮದ ಕತೆಯವರೆಗೆ ಒಳಗೊಂಡಿರುವ ಕಾದಂಬರಿ.


ತುಂಬಾ ಒಳ್ಳೆಯ ಕತೆಯಾಗಿದೆ ಓದುಗರರನ್ನು ಕುತೂಹಲಕ್ಕೆ ಕರೆದೊಯ್ಯುವ ಕತೆಯಾಗಿದೆ. ಈ ಕಾದಂಬರಿಯನ್ನು ಕು. ಚಂದ್ರಿಕಾರವರು ಬರೆದಿರುತ್ತಾರೆ. ಈ ಕೃತಿಗೆ ಇವರಿಗೆ "ಶ್ರೀ ಪ್ರಭಾಕರ್ ನೀರ್ ಮಾರ್ಗ ಯುವವಾಹಿನಿ" ಸಾಹಿತ್ಯ ಪ್ರಶಸ್ತಿ ದೊರಕಿತು. ಸಾಹಿತ್ಯ ಲೋಕದಲ್ಲಿ ಭರವಸೆ ಮೂಡಿಸಿರುವ ಕಾದಂಬರಿಗಾರ್ತಿ. ಅವರ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಬರೆದ ಕತೆ. ಈ ಕಾದಂಬರಿಯಲ್ಲಿ ಸ್ವಪ್ನ ಮತ್ತು ವಾಸ್ತವ್ ಮುಖ್ಯ ಪತ್ರಧಾರಿಗಳು ಇವರ ನಡುವಿನ ಸಂಬಂಧಗಳನ್ನು ಕಾಣಬಹುದು ಮತ್ತು ಈ ಕತೆ ಕೊನೆಗೆ ಯಾವ ರೀತಿ ಕೊನೆಯಗುತ್ತದೆ ಎಂದು ನೋಡಬಹುದು.


ಜೀವದಲ್ಲಿ ಕಷ್ಟಗಳು ಬರುತ್ತದೆ. ಅದೆಷ್ಟೋ ಬಾರಿ ಸೋತರೂ, ಎಷ್ಟೇ ಅಲೆದಾಡಿದರೂ, ಸಂದರ್ಶನಕ್ಕೆ ಹೋದರೂ ಕೆಲಸವೇ ಕೊಡುತ್ತಿಲ್ಲ ಎಂದು ನಿರಾಸೆಗೆ ಒಳಪಟ್ಟ ಸ್ವಪ್ನ "ಓಂ ಪ್ರಕಾಶ್ ಇಂಡಸ್ಟ್ರೀಸ್" ಎಂಬ ಕಂಪನಿಗೆ ಸಂದರ್ಶನಕ್ಕೆ ಎಂದು ಹೋಗುತ್ತಾಳೆ. ಮನದಲ್ಲೇ ನೆನಪಿಸುತ್ತಾಳೆ ನನ್ನ ಹಾಗೆಯೇ ಅದೆಷ್ಟೋ ಜನರು ಸಂದರ್ಶನಕ್ಕೆಂದು ಬಂದಿರುವರು ಎಂದು ಕಂಪೆನಿಗೆ ಕಾಲಿಡುತ್ತಾಳೆ.


ಕಾಲಿಟ್ಟ ಸಂದರ್ಭದಲ್ಲಿ ಒಮ್ಮೆಲೇ ಆಶ್ಚರ್ಯವಾಗುತ್ತದೆ ವಾಸ್ತವ್ ಈ ಕಂಪನಿಯ ಬಾಸಾ ಎಂದು ಆಗಲೇ ನಿರ್ಧಾರ ಮಾಡುತ್ತಾಳೆ ನನಗೆ ಈ ಕಂಪನಿಯಲ್ಲಿ ಕೆಲಸ ಬೇಡ ಎಂದು ಇಂಟರ್ವ್ಯೂಗೆ ಹೋಗಿ ವಾಪಸ್ ಮನೆಗೆ ತೆರಳುತ್ತಾಳೆ. ಆಕೆ ಕಾಲೇಜು ಹೋಗುತ್ತಿದ್ದ ಸಮಯದಲ್ಲಿ ವಾಸ್ತವ್ ಮತ್ತು ಈಕೆ ಒಂದೇ ತರಗತಿಯಾಗಿದ್ದರು. ಇವರಿಬ್ಬರು ಮಿತ್ರ ದ್ರೋಹಿಗಳು ಆಗಿದ್ದರು ಒಬ್ಬರನ್ನು ಕಂಡಾಗ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ ಹಾಗಾಗಿ ಈತನ ಕಂಪನಿಯಲ್ಲಿ ದುಡಿಯುವುದು ಈಕೆಗೆ ಇಷ್ಟ ಇರಲಿಲ್ಲ. ಆದರೆ ಮನೆಯ ಪರಿಸ್ಥಿತಿ ನೋಡಿದರೆ ಮನಸ್ಸು ಸಮಾಧಾನವಾಗಲಿಲ್ಲ ಈಕೆ ತಂದೆಯನ್ನು ಕಳೆದುಕೊಂಡಿರುವ ಕಾರಣ ತನ್ನ ಚಿಕ್ಕಪ್ಪ ಚಿಕ್ಕಮನವರ ಜೊತೆಗೆ ಸಂಸಾರ ಮಾಡಬೇಕಿತ್ತು. ಒಂದು ಕಡೆ ತಂಗಿಯ ಶಿಕ್ಷಣದ ಬಗ್ಗೆ ಚಿಂತೆಯಾದರೆ ಇನ್ನೊಂದು ಕಡೆ ಮಾನಸಿಕವಾಗಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಬಳಲುತ್ತಿರುವ ತಾಯಿ. ಎನ್ನುವ ಚಿಂತೆ ಮತ್ತು ಅಮ್ಮ ತಂಗಿಯ ಹೊಣೆಗಾರಿಕೆ ಎಲ್ಲಾ ಇವಳ ಕೈಯಲ್ಲೇ ಇತ್ತು ಹಾಗಾಗಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಾಳೆ. ಎಷ್ಟೇ ಕಷ್ಟ ಬಂದರೂ ಸಹಿಸಿಕೊಂಡು ಜೀವನವನ್ನು ಮುಂದುವರಿಸುತ್ತಾಳೆ.


ಈಕೆ ಬಹಳ ಸುಂದರವಾಗಿದ್ದ ಹುಡುಗಿ ಹಾಗಾಗಿ ವಾಸ್ತವ್ ನ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿದ್ದಳು. ಮುಂದೆ ಆತನ ಜೊತೆಗೆ ಸ್ವಪ್ನಳ ಜೊತೆ ಮದುವೆ ಮಾಡಲು ನಿರ್ಧಾರ ಮಾಡಿದ್ದರು ಆದರೆ ಅವರಿಬ್ಬರಿಗೂ ಇಷ್ಟನೆ ಇರಲ್ಲಿಲ್ಲ ಒಬ್ಬರನ್ನು ಒಬ್ಬರಿಗೆ ಕಂಡರೆ ಆಗುತ್ತಿರಲಿಲ್ಲ ಕಾಲೇಜು ದಿನಗಳ ದ್ವೇಷ ಇತ್ತು. ಹಾಗಾಗಿ ಅವರಿಬ್ಬರಿಗೂ ಇಷ್ಟನೇ ಇರಲಿಲ್ಲ. ಆದರೆ ಕೊನೆಗೆ ವಾಸ್ತವ್ ಗೆ ಆಕೆಯ ಮೇಲೆ ಹೇಗೋ ಪ್ರೀತಿ ಹುಟ್ಟಿಕೊಳ್ಳುತ್ತೇ ಮುಂದೆ ಆಕೆಗೂ ಇಷ್ಟವಾಗಿ ಮದುವೆ ಮಾಡಲು ಒಪ್ಪಿಕೊಳ್ಳುತ್ತಾರೆ.


ಮೊದಲು ದ್ರೋಹಿಗಳು ಆಗಿದ್ದು ಕೊನೇಗೆ ಪ್ರೇಮಿಗಳಾಗುತ್ತಾರೆ. ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವ ಮನಸ್ಸು ಇರಬೇಕು ಆಗ ಆ ಪ್ರೀತಿ ಚಿರಕಾಲ ಉಳಿಯುತ್ತದೆ ಈ ಕತೆ ಪೂರ್ತಿ ಓದಬೇಕಿದ್ದರೆ ಈ ಕಾದಂಬರಿಯನ್ನು ಓದಿ ತುಂಬಾ ಚೆನ್ನಾಗಿರುವ ಕತೆ.


ಪ್ರೀತಿ ಶುರುವಾಗಬೇಕಿದ್ದರೆ ಸುಲಭವಲ್ಲ, ಮೊದಲು ಕೋಪ ಜಗಳ ಎಲ್ಲಾ ಬರುತ್ತೆ ಕೊನೆಗೆ ಪ್ರೀತಿ ಹುಟ್ಟಿಕೊಳ್ಳುತ್ತೆ. ಇಂದಿನ ದಿನಗಳಲ್ಲಿ ಒಬ್ಬರನ್ನು ನೋಡಿದರೆ ಸಾಕು ಕ್ರಶ್ ಆಗಿ ಬಿಡುತ್ತೆ ಆಮೇಲೆ ರಿಕ್ವೆಸ್ಟ್ ಬರುತ್ತೆ ಪ್ರೀತಿ ಶುರುವಾಗುತ್ತೆ. ಆದರೆ ಈ ಕತೆಯಲ್ಲಿ ಪ್ರೀತಿ ಹುಟ್ಟಿಕೊಳ್ಳಲು ಅದೆಷ್ಟೋ ಸಮಯವೇ ಬೇಕಾಗಿತ್ತು. 


- ರಸಿಕಾ ಮುರುಳ್ಯ

ತೃತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top