ಗರ್ಭದಲ್ಲಿರುವ ಶಿಶು ಸಂಗೀತಕ್ಕೆ ಸ್ಪಂದಿಸುತ್ತದೆಯೇ? ಗರ್ಭಾವಸ್ಥೆಯಲ್ಲಿ ಸಂಗೀತ ಕೇಳುವುದು ಪ್ರಯೋಜನಕಾರಿಯೇ?
ಹೌದು. ಗರ್ಭಧಾರಣೆಯ ಕೊನೆಯ ತ್ರೈಮಾಸಿಕದಲ್ಲಿ ಶಿಶುವಿನ ಮೆದುಳಿನ ಬೆಳವಣಿಗೆಗೆ ಸಂಗೀತವನ್ನು ಕೇಳುವುದು ತುಂಬಾ ಪ್ರಯೋಜನಕಾರಿಯಾಗಿದೆ. ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ, ಶಿಶುವು ಸಂಗೀತವನ್ನು ಕೇಳುವ ಮತ್ತು ಸಂಗೀತಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸುಮಾರು 23 ವಾರಗಳ ಗರ್ಭಾವಸ್ಥೆಯಲ್ಲಿ, ಶಿಶು ತಾಯಿ ಕೇಳುವ ಸಂಗೀತವನ್ನು ಕೇಳಲು ಸಾಧ್ಯವಾಗುತ್ತದೆ. ಇದು ಮಗುವಿನ ಶ್ರವಣ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಅಂತಹ ಸಂಗೀತವು ಮಗುವಿಗೆ ಹಿತವಾದ ಮತ್ತು ಆಹ್ಲಾದಕರವಾಗಿರಬೇಕು.
ಸಂಗೀತವು ತಾಯಿಯ ಮೇಲೆ ಮಾತ್ರವಲ್ಲದೆ ಹುಟ್ಟಲಿರುವ ಮಗುವಿನ ಮೇಲೂ ಹಿತವಾದ ಮತ್ತು ಧನಾತ್ಮಕ ಪ್ರಭಾವ ಬೀರುತ್ತದೆ. ಸಂಗೀತವು ಮಗುವಿನ ವಾತಾವರಣವನ್ನು ಶಾಂತಗೊಳಿಸುತ್ತದೆ ಮತ್ತು ಅವರ ನಿದ್ರೆಯ ಮಾದರಿಯನ್ನು (sleep pattern) ಪೋಷಿಸುತ್ತದೆ. ನಿಧಾನ, ಮೃದುವಾದ ಮತ್ತು ಪುನರಾವರ್ತಿತ ಸಂಗೀತವು ಮಗುವಿನ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ಆಳವಾದ ಉಸಿರಾಟಕ್ಕೆ (deep breathing) ಸಹಾಯ ಮಾಡುವ ಮೂಲಕ ಅವರನ್ನು ಶಾಂತಗೊಳಿಸುತ್ತದೆ. ಮಗುವಿನಲ್ಲಿ ನೆನಪು ಮತ್ತು ಭಾವನೆಗಳು ಬೆಳೆಯಲು ಇದುಸಹಾಯ ಮಾಡುತ್ತದೆ. ಗರ್ಭಾಶಯದೊಳಗೆ ಮಗುವು ವಿವಿಧ ಶಬ್ದಗಳನ್ನು ಕೇಳಬಹುದು. ತಾಯಿಯ ಹೃದಯ ಬಡಿತದ ಸದ್ದು, ತಾಯಿಯ ಹೊಟ್ಟೆಯೊಳಗಿನ ಸದ್ದು, ಬಾಹ್ಯ ಪ್ರಪಂಚದ ಧ್ವನಿಗಳು ಮತ್ತು ಸಂಗೀತ. ಇವೆಲ್ಲವೂ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಗರ್ಭಿಣಿ ತಾಯಿಯು ತನ್ನನ್ನು ತಾನು ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳಬಾರದು. ಜನಸಂದಣಿ, ಫಿಲ್ಮ್‌ಗಳು, ಸೈರನ್, ವಿಮಾನ, ಬಂದೂಕು, ಯಂತ್ರೋಪಕರಣಗಳು ಇತ್ಯಾದಿಗಳ ಅತಿ ದೊಡ್ಡ ಶಬ್ದಗಳನ್ನು ಕೇಳುವುದು ಬೆಳೆಯುತ್ತಿರುವ ಮಗುವಿಗೆ ಅಪಾಯಕಾರಿ.. ಗರ್ಭಾವಸ್ಥೆಯಲ್ಲಿ, ಭ್ರೂಣವು ವಿವಿಧ ಧ್ವನಿಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು. ಶ್ರವಣೇಂದ್ರಿಯ ವ್ಯವಸ್ಥೆಯು (auditory system) ಗರ್ಭಧಾರಣೆಯ 18 ನೇ ವಾರದಿಂದ 5 ಅಥವಾ 6 ತಿಂಗಳ ವಯಸ್ಸಿನವರೆಗೆ ಬೆಳವಣಿಗೆಯಾಗಲು ಪ್ರಾರಂಭವಾಗುತ್ತದೆ.
ಗರ್ಭಾವಸ್ಥೆಯಲ್ಲಿ ಸಂಗೀತ ಚಿಕಿತ್ಸೆಯ ಪ್ರಯೋಜನಗಳು-
• ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ
• ಗರ್ಭಾವಸ್ಥೆಯಲ್ಲಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ
• ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
• ಖಿನ್ನತೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ
• ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವುದು
• ಶಸ್ತ್ರಚಿಕಿತ್ಸೆಗೆ ಮುನ್ನ ಪ್ರಯೋಜನಕಾರಿ
• ಎಂಡಾರ್ಫಿನ್ ಅನ್ನು ಹೆಚ್ಚಿಸುತ್ತದೆ
• ದೇಹದಲ್ಲಿ ಆತಂಕವನ್ನು ಕಡಿಮೆ ಮಾಡುತ್ತದೆ
• ಮಗುವಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ರಾಗ -ಕಾಪಿ
ಆರೋಹಣ -ಸ ರಿ2 ಮ1 ಪ ನಿ3 ಸ
ಅವರೋಹಣ- ಸ ನಿ2 ದ2 ನಿ2 ಪ ಮ1 ಗ2 ರಿ2 ಸ
ರಾಗ ಕಾಪಿ 22 ನೇ ಮೇಳಕರ್ತ ಖರಹರಪ್ರಿಯ ಜನ್ಯ ರಾಗವಾಗಿದೆ. ಇದು ಅತ್ಯಂತ ಸುಂದರವಾದ ರಾಗವೆಂದು ಪರಿಗಣಿಸಲಾಗಿದೆ. ಹೀಗಾಗಿ ರಾಗವನ್ನು ನಿಧಾನಗತಿಯಲ್ಲಿ ಹಾಡಲಾಗುತ್ತದೆ.
ರಾಗ ಕಾಪಿಯ ಪ್ರಯೋಜನಗಳು-
• ಇದು ದುಃಖ, ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
• ಭಕ್ತಿಯ ಭಾವವನ್ನು ನೀಡುತ್ತದೆ.
• ಪಲ್ಸ್ ರೇಟ್ (pulse rate) /ನಾಡಿ ಬಡಿತವನ್ನು ಸುಧಾರಿಸುತ್ತದೆ ಮತ್ತು ನಮ್ಮ ಕೆಲಸದಲ್ಲಿ ಸುಧಾರಿಸಲು ಸಹಾಯ ಮಾಡುತ್ತದೆ.
• ಸಂತೋಷವನ್ನು ನೀಡುತ್ತದೆ ಮತ್ತು ಸಮಯ ಪ್ರಜ್ಞೆಯನ್ನು ಸುಧಾರಿಸುತ್ತದೆ.
-ಡಾ.ರಶ್ಮಿ ಭಟ್
ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ