ಅರ್ಕುಳ: ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ವರ್ಷಾವಧಿ ಸಾಣದ ಜಾತ್ರೆಯು ಫೆಬ್ರವರಿ 20 ರವಿವಾರದಿಂದ 26 ಶನಿವಾರದವರೆಗೆ ನಡೆಯಲಿದೆ.
ಫೆಬ್ರವರಿ 20ರ ರವಿವಾರದಂದು ಮುಂಜಾನೆ ತೋರಣ ಮುಹೂರ್ತ ಹಾಗೂ ಸಂಜೆ ಪ್ರಥಮ ಚೆಂಡು, ದಿನಾಂಕ 24ರ ಗುರುವಾರದಂದು ಕೊನೆ ಚೆಂಡು, ರಾತ್ರಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ಆಗಮಿಸಿ, ದ್ವಜಾರೋಹಣ ಹಾಗೂ ಕಂಚಿಲು ಸೇವೆ ನಡೆಯಲಿದೆ. 25ರ ಶುಕ್ರವಾರದಂದು ಪೂರ್ವಾಹ್ನ ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿ ಪ್ರತಿಷ್ಠೆ,ಸಾಣದಲ್ಲಿ ಮಡಸ್ತಾನ ಸೇವೆ, ನವಕ ಕಲಶಾಭಿಷೇಕ, ಅನ್ನ ಸಂತರ್ಪಣೆ, ಸಂಜೆ 6.30 ಕ್ಕೆ ಶ್ರೀ ಉಳ್ಳಾಕ್ಲು ಧರ್ಮದೇವತೆಗಳ ನೇಮ ಹಾಗೂ ಬಂಡಿ ಉತ್ಸವ ನಡೆಯಲಿದೆ.
ಫೆಬ್ರವರಿ 26ರ ಶನಿವಾರದಂದು ಪೂರ್ವಾಹ್ನ ಸಾಣದಲ್ಲಿ ಚಂಡಿಕಾಯಾಗ, ಮಧ್ಯಾಹ್ನ ಪಂಚಾಮೃತ ಅಭಿಷೇಕ, ನಂದಿ ಪೂಜೆ, ಅನ್ನ ಸಂತರ್ಪಣೆ, ಸಂಜೆ ಅರ್ಕುಳ ಬಸದಿಯಲ್ಲಿ ಮಹಾಮಾತೆ ಪದ್ಮಾವತೀ ದೇವಿಗೆ ಪುಷ್ಪಾಲಂಕಾರ ಪೂಜೆ, ಸಂಜೆ 6.30ರಿಂದ ಶ್ರೀ ಮಗೃಂತಾಯಿ ಧರ್ಮದೈವದ ನೇಮ, ಬಂಡಿ ಉತ್ಸವಗಳು ಸಂಪನ್ನಗೊಳ್ಳಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ