ಕಾಯಿ ಅಡಿಕೆಯನ್ನು ’ಮಾರಲು ಸಿದ್ಧ’ವಾಗಿಸಿ ಕೊಡುವ ಉಕ ಸೊಸೈಟಿ

Upayuktha
0
ಅಡಿಕೆ ಕೃಷಿಕರದೇ ಒಂದು ವಿನೂತನ ಸ್ಟಾರ್ಟಪ್‌ ಉದ್ಯಮ


ಉ.ಕ. ಜಿಲ್ಲೆಯ ಹುಳಗೋಳ ಗ್ರೂಪ್ ಗ್ರಾಮಗಳ ಸಹಕಾರಿ ಸಂಘ (ಭೈರುಂಬೆ) ತನ್ನ ’ತೋಟಕಾಶಿ’ ರೈತೋತ್ಪಾದಕ ಕಂಪೆನಿಯ ಮೂಲಕ ಈ ವರ್ಷ ಮೊದಲ ಬಾರಿಗೆ ವಿನೂತನ, ಕೃಷಿಕಪರ ಸೇವೆ ಆರಂಭಿಸಿದೆ.


ಸೇವೆ ಬೇಕಾದ ಸದಸ್ಯರ ಮನೆಯಿಂದ ಒಟ್ಟು 35 ಟನ್ ಕಾಯಿ ಅಡಿಕೆ ತಂದು, ಸುಲಿದು ಬೇಯಿಸಿ ಅವರ ಬಾಗಿಲಿಗೇ ಡೆಲಿವರಿ ಕೊಟ್ಟಿದ್ದಾರೆ. 


ಒಟ್ಟು ಮೂರು ಜಾಗ- ನೀಡಗೋಡ, ಬೊಮ್ನಳ್ಳಿ, ಹುಳಗೋಳ- ಗಳಲ್ಲಿ ತಲಾ ಹತ್ತು ಕಾರ್ಮಿಕರ ಮೂಲಕ ಅಡಿಕೆ ಸುಲಿಸಿ ಬೇಯಿಸಿ ಒಣಗಿಸಿ ಕೊಟ್ಟಿದ್ದಾರೆ. ಆಯಾ ಕೃಷಿಕರು, ಬೇಕಿದ್ದರೆ ಇದನ್ನು ನೇರ ಮಾರಬಹುದಾಗಿದೆ.


ಈ ಸೇವೆಗೆ ತೋಟಕಾಶಿ ಕ್ವಿಂಟಾಲ್ ಅಡಿಕೆಗೆ 4,500 ಶುಲ್ಕ ವಿಧಿಸಿದೆ. "ಮಾನವಶಕ್ತಿಯಿಂದ ಅಡಿಕೆ ಸುಲಿದದ್ದಕ್ಕೆ ಕಿಲೋಗೆ 12- 13 ರೂ ತಗಲಿದೆ. ನಮ್ಮ ಸೇವಾ ಶುಲ್ಕದಲ್ಲಿ ಇದುವೇ ಗಣನೀಯ ಖರ್ಚಿನ ಘಟಕ ಆಗಿದ್ದು, ಸುಲಿತದ ಯಾಂತ್ರೀಕರಣದತ್ತ ಚಿಂತಿಸುತ್ತಿದ್ದೇವೆ” ಎನ್ನುತ್ತಾರೆ ಸಂಸ್ಥೆಯ ಪದಾಧಿಕಾರಿಗಳು.

(ಚಿತ್ರ, ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top