ಅಂಬಿಕಾ ಕಾಲೇಜಿನಲ್ಲಿ ರಾಮಾಯಣ ಪ್ರವಚನ ಮಾಲಿಕೆ ಕಾರ್ಯಕ್ರಮ

Upayuktha
0

 

ರಾಮಾಯಣದಿಂದಾಗಿ ಶ್ರೀರಾಮನ ಕಲ್ಪನೆ ಸದಾ ಪ್ರಚಲಿತ: ವಿದ್ವಾನ್ ಕೇಶವ ಭಟ್ಟ


ಪುತ್ತೂರು: ವೈಕುಂಠವಾಸಿಯಾದ ವಿಷ್ಣುವು ರಾಮಾದಿ ಅವತಾರಗಳಿಂದ ಭೂಮಿಯಲ್ಲಿ ಅವತರಿಸಿದನು. ಆದರೆ ರಾಮನ ರೂಪ ಕೇವಲ ತ್ರೇತಾಯುಗಕ್ಕೆ ಸೀಮಿತಗೊಳ್ಳಬಾರದೆಂದು ಬ್ರಹ್ಮದೇವನು ಯೋಚಿಸಿ ವಾಲ್ಮೀಕಿ ಮಹರ್ಷಿಗಳ ಮೂಲಕ ರಾಮಾಯಣ ಕಾವ್ಯ ಸೃಷ್ಟಿಗೆ ಸಂಕಲ್ಪಿಸಿದನು. ಅದರನ್ವಯ ಉದ್ಘಾರರೂಪದಲ್ಲಿ ಹುಟ್ಟಿಕೊಂಡ ಶ್ಲೋಕವೊಂದನ್ನು ಆಧರಿಸಿ ಶ್ರೀಮದ್ ರಾಮಾಯಣ ರಚನೆಯಾಯಿತು ಎಂದು ವಾಗ್ಮಿ ವಿದ್ವಾನ್ ಕೇಶವ ಭಟ್ಟ ಕೇಕಣಾಜೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ಸಂಸ್ಕೃತ, ತತ್ತ್ವಶಾಸ್ತ್ರ ವಿಭಾಗಗಳು ಹಾಗೂ ಐಕ್ಯುಎಸಿ ಘಟಕದ ಆಶ್ರಯದಲ್ಲಿ ಅಯೋಜಿಸಲಾಗುತ್ತಿರುವ ಶ್ರೀಮದ್ ರಾಮಾಯಣ ಪಾಕ್ಷಿಕ ಪ್ರವಚನ ಮಾಲಿಕೆಯ ಎರಡನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ 'ವಾಲ್ಮೀಕಿ ರಾಮಾಯಣ ಪೂರ್ವರಂಗ' ಎಂಬ ವಿಷಯದ ಬಗೆಗೆ ಸೋಮವಾರ ಉಪನ್ಯಾಸ ನೀಡಿದರು.


ರಾಮಾಯಣ ಕಾವ್ಯವಾಚನಕ್ಕೆ ಸೂಕ್ತವಾದವರು ಯಾರೆಂದು ವಾಲ್ಮೀಕಿ ಮಹರ್ಷಿಗಳು ತರ್ಕಿಸುತ್ತಾರೆ. ಅವರ ನಿರ್ಣಯದಂತೆ ಆಶ್ರಮವಾಸಿಗಳಾಗಿದ್ದ ಲವ-ಕುಶರು ರಾಮಾಯಣವನ್ನು ಅತ್ಯಂತ ಸೊಗಸಾಗಿ ಹಾಡಿ ಎಲ್ಲರ ಮನಗೆಲ್ಲುತ್ತಾರೆ. ಕೊನೆಗೆ ಶ್ರೀರಾಮನ ಸಮ್ಮುಖದಲ್ಲೂ ರಾಮಾಯಣವನ್ನು ಹಾಡಿ ಆತನ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂದು ರಾಮಾಯಣದ ಹಿನ್ನೆಲೆಯ ಬಗೆಗೆ ತಿಳಿಸಿಕೊಟ್ಟರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಸದಸ್ಯ ಪ್ರಸನ್ನ ಭಟ್, ಕಾಲೇಜಿನ ಪ್ರಾಚಾರ್ಯ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಭಟ್ಟ ಗಾಳಿಮನೆ, ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಐಕ್ಯುಎಸಿ ಘಟಕದ ಸಂಯೋಜಕ ಪ್ರೊ. ಚಂದ್ರಕಾಂತ ಗೋರೆ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು, ಬೋಧಕೇತರ ವರಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಹಿಮಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top