|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊರಗಜ್ಜ ಸ್ವಾಮಿಗೆ ಅಪಮಾನ: ಶಿಕ್ಷೆಗಾಗಿ ದೇವಸ್ಥಾನದಲ್ಲಿ ಪ್ರಾರ್ಥನೆ

ಕೊರಗಜ್ಜ ಸ್ವಾಮಿಗೆ ಅಪಮಾನ: ಶಿಕ್ಷೆಗಾಗಿ ದೇವಸ್ಥಾನದಲ್ಲಿ ಪ್ರಾರ್ಥನೆ


ಪುತ್ತೂರು: ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಅಗರಿಯಲ್ಲಿ ಸ್ವಾಮಿ ಕೊರಗಜ್ಜನ ವೇಷ ಧರಿಸಿ ದೈವ ಭಕ್ತರ ಭಾವನೆಗೆ ಅಪಮಾನ ಮಾಡಿರುವ ಮುಸ್ಲಿಂ ವರ ಮತ್ತು ಇದಕ್ಕೆ ಕುಮ್ಮಕ್ಕು ನೀಡಿದ  ಹಾಗೂ ಷಡ್ಯಂತ್ರ ನಡೆಸಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ದ.ಕ., ಕಾಸರಗೋಡು  ಮತ್ತು ಉಡುಪಿ ಜಿಲ್ಲೆಗಳ 1 ಸಾವಿರ ಶ್ರದ್ಧಾ ಕೇಂದ್ರಗಳಲ್ಲಿ ಹಿಂದೂಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಯುವ ತೀರ್ಮಾನದಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವಹಿಂದು ಪರಿಷತ್ ವತಿಯಿಂದ ಸಾಮೂಹಿಕ ಪ್ರಾರ್ಥನೆ ಜ.11ರಂದು ನಡೆಯಿತು.


ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ನಗರ ಪ್ರಖಂಡ ಸಂಚಾಲಕ ಹರೀಶ್ ದೋಳ್ಪಾಡಿ, ನಗರ ಅಧ್ಯಕ್ಷ ಜನಾರ್ದನ ಬೆಟ್ಟ, ವಿಶಾಖ್ ಶಶಿಹಿತ್ಲು, ನಗರ ಪ್ರಖಂಡ ಸಂಚಾಲಕ ಚೇತನ್ ಬೊಳುವಾರು, ಕಾರ್ಯಕರ್ತ ಗಣೇಶ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಮೊದಲದವರು  ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post