ಆಳ್ವಾಸ್ ಪ್ಲಾಗಿಂಗ್ ಡ್ರೈವ್: ಶಿಕ್ಷಣದ ಜತೆಗೆ ಸ್ವಚ್ಛತೆಯ ಪಾಠ

Upayuktha
0

 

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ಪುತ್ತಿಗೆ ಪಂಚಾಯತ್ ಸಹಯೋಗದಲ್ಲಿ ಹಂಡೇಲು ಕ್ರಾಸ್ ಬಳಿ ಪ್ಲಾಗಿಂಗ್ ಡ್ರೈವ್ ನಡೆಯಿತು. ಮಾಲಿನ್ಯ ನಿಯಂತ್ರಣಾ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾನವಿಕ ವಿಭಾಗದ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಹಂಡೇಲು ಕ್ರಾಸ್‌ನಿಂದ ಮೂಲ್ಕಿ - ಕಟೀಲು ಮಾರ್ಗ ಹಾಗೂ ಮೂಡುಬಿದಿರೆ - ಮಂಗಳೂರು ಮಾರ್ಗದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.


ಸುಮಾರು ಐದು ಕಿಮೀ ವ್ಯಾಪ್ತಿಯ 200ಕ್ಕೂ ಅಧಿಕ ಚೀಲಗಳಲ್ಲಿ ಗಾಜು, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಲಾಯಿತು. ಕಸ ವಿಲೇವಾರಿ ಮಾಡುತ್ತಿದ್ದ ವಿವಿಧ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ವಿಭಾಗದ 98 ವಿದ್ಯಾರ್ಥಿಗಳು ಪ್ಲಾಗಿಂಗ್‌ನಲ್ಲಿ ಭಾಗವಹಿಸಿದ್ದರು. ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರಿಣಾಕ್ಷಿ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಚಂದ್ರಶೇಖರ್ ಮಯ್ಯ, ಮನಃಶಾಸ್ತ್ರ ವಿಭಾಗ ಮುಖ್ಯಸ್ಥ ನಿತಿನ್ ಡಿಸಿಲ್ವ, ಪುತ್ತಿಗೆ ಪಂಚಾಯತ್ ಅಧ್ಯಕ್ಷ ಪ್ರವೀಣ್ ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top