ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಚಾಂಪಿಯನ್

Upayuktha
0

 

ಮೂಡಬಿದಿರೆ: ಆಳ್ವಾಸ್ ಪುರುಷರ ತಂಡ ಬಾಗಲಕೋಟೆಯ ಬೀಳಗಿಯಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


ರಾಜ್ಯದ 16 ಪುರುಷರ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಫೈನಲ್ ನಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಸಹ್ಯಾದ್ರಿ ಯೂತ್ ಕ್ಲಬ್ ತಂಡವನ್ನು 35-19 ಅಂಕಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.


ಸೆಮಿಫೈನಲ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಕಾಮಧೇನು ಯೂತ್ ಕ್ಲಬ್ ತಂಡವನ್ನು ಹಾಗೂ ಸಹ್ಯಾದ್ರಿ ತಂಡ ಹಾಸನಂಬ ಬಿಬಿಸಿ ತಂಡಗಳನ್ನು ನೇರ ಸೆಟ್ ಗಳಿಂದ ಮಣಿಸಿ ಫೈನಲ್ ಹಂತಕ್ಕೆ ತೇರ್ಗಡೆ ಗೊಂಡಿದ್ದವು.


ಸಹ್ಯಾದ್ರಿ ಬೆಂಗಳೂರು ರನ್ನರ್-ಅಪ್, ಹಾಸನಂಬ ಬಿಬಿಸಿ ತೃತೀಯ ಸ್ಥಾನವನ್ನು ಹಾಗೂ ಕಾಮಧೇನು ಬೆಂಗಳೂರು ತಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡವು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top