ಅಂಬಿಕಾದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

Upayuktha
0

 

ಪುತ್ತೂರು: ಹದಿಹರೆಯದ ಹುಡುಗ-ಹುಡುಗಿಯರ ಮನಸ್ಸು ಗೊಂದಲಮಯ. ಯಾವುದು ಸರಿ ಯಾವುದು ತಪ್ಪು ಎನ್ನುವ ವಿಚಾರ ತಿಳಿಯದಿರುವ ಸ್ಥಿತಿ. ಇದು ಸ್ವಾಭಾವಿಕವೂ ಹೌದು. ಈ ವಯಸ್ಸಿನಲ್ಲಿ ಅಪ್ಪ-ಅಮ್ಮ ಹೇಳುವುದನ್ನು ಕೇಳಿ ಮುನ್ನಡೆಯಿರಿ. ದುಡ್ಡು ಕೊಟ್ಟು ಏನನ್ನು ಬೇಕಾದರೂ ಪಡೆಯಬಹುದು; ಅನುಭವವನ್ನು ಪಡೆಯಲು ಸಾಧ್ಯವಿಲ್ಲ. ಒಬ್ಬ ಆದರ್ಶ ವ್ಯಕ್ತಿಯ ಆದರ್ಶವನ್ನು ಪಾಲಿಸಿ. ಅವರು ಪರಿಚಿತರಾಗಿರಬೇಕೆಂದಿಲ್ಲ. ಸ್ವಪ್ರಯತ್ನದಿಂದ, ಹೆಚ್ಚು ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಿ. ಜಯಶೀಲರಾಗಿ ಎಂದು ಎ.ಜೆ.ಶೆಟ್ಟಿ ತಾಂತ್ರಿಕ ಕಾಲೇಜಿನ ತರಬೇತು ಮತ್ತು ನಿಯೋಜನಾಧಿಕಾರಿ ವಿವೇಕ ರಂಜನ್ ಭಂಡಾರಿ ಹೇಳಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿ.ಯು. ವಿದ್ಯಾರ್ಥಿಗಳಿಗಾಗಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣಿತಶಾಸ್ತ್ರ ಉಪನ್ಯಾಸಕಿ ರಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top