|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇನ್‌ಫೋಸಿಸ್ ವತಿಯಿಂದ ಬಂಟ್ವಾಳ ಘಟಕಕ್ಕೆ ಕಂಪ್ಯೂಟರ್ ವಿತರಣೆ

ಇನ್‌ಫೋಸಿಸ್ ವತಿಯಿಂದ ಬಂಟ್ವಾಳ ಘಟಕಕ್ಕೆ ಕಂಪ್ಯೂಟರ್ ವಿತರಣೆ

ಬಂಟ್ವಾಳ: ದಿನಾಂಕ: 07-01-2022 ರಂದು ಬಂಟ್ವಾಳ ಘಟಕದ ವಾರದ ಕವಾಯತು ಬಂಟ್ವಾಳ ಗೃಹರಕ್ಷಕದಳ ಕಛೇರಿಯ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಘಟಕಕ್ಕೆ ಇನ್‌ಫೋಸಿಸ್ ವತಿಯಿಂದ ನೀಡಲಾದ ಕಂಪ್ಯೂಟರ್‌ ಅನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಇವರು ಬಂಟ್ವಾಳ ಘಟಕದ ಘಟಕಾಧಿಕಾರಿಯಾದ ಶ್ರೀ ಐತಪ್ಪ ಇವರಿಗೆ ಹಸ್ತಾಂತರಿಸಿದರು.


ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳ ವಾರದ ಕವಾಯತಿನ ಹಾಜರತಿಗಳನ್ನು ಕಂಪ್ಯೂಟರ್ ಮೂಲಕವೆ ಕಳುಹಿಸುವಂತೆ ಸೂಚಿಸಿದರು ಮತ್ತು ಕಾಗದ ರಹಿತ ಕಛೇರಿ ಆಗಬೇಕೆಂದು ನುಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ಘಟಕದ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم