|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೇನೆಯಲ್ಲಿ ಕಾರ್ಯ ನಿರ್ವಹಿಸುವುದು ಹೆಮ್ಮೆಯ ಸಂಗತಿ: ಕ್ಯಾಪ್ಟನ್ ಅನಿತೇಜ್

ಸೇನೆಯಲ್ಲಿ ಕಾರ್ಯ ನಿರ್ವಹಿಸುವುದು ಹೆಮ್ಮೆಯ ಸಂಗತಿ: ಕ್ಯಾಪ್ಟನ್ ಅನಿತೇಜ್

 

ಪುತ್ತೂರು: ನಾವು ಹುಟ್ಟಿ ಬೆಳೆದ ನಾಡನ್ನು ಪ್ರೀತಿಸಿ, ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಶ್ರಮಿಸಿದರೆ ನಾವು ಕಲಿತ ವಿದ್ಯೆ ಸಾರ್ಥಕ. ಭಾರತದ ಉತ್ತರ ಭಾಗದ ಜನರು ತಮ್ಮ ಸೇನೆಗೆ ಮಕ್ಕಳನ್ನು ಸೇರಿಸಲು ಹೆಮ್ಮೆ ಪಡುತ್ತಾರೆ ಮತ್ತು ಅಲ್ಲಿಯ ಜನರು ಸೇನೆಯ ಸಮವಸ್ತ್ರವನ್ನು ಧರಿಸಿ ದೇಶ ಸೇವೆ ಮಾಡಲು ಹಾತೊರೆಯುತ್ತಾರೆ. ನಮ್ಮಲ್ಲೂ ಸೇನೆಗೆ ಸೇರಲು ಅಂತಹ ಉತ್ಸಾಹ ಮೂಡಿ ಬರಬೇಕು ಎಂದು ಭಾರತೀಯ ಸೇನೆಯ 15ನೇ ಬೆಟಾಲಿಯನ್ ರೆಜಿಮೆಂಟಿನಲ್ಲಿ ಮೆಡಿಕಲ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರಿನ ವೈದ್ಯ ಡಾ. ಶ್ರೀಕಾಂತ್ ರಾವ್ ಹಾಗೂ ಡಾ. ನಂದಿತಾ ಇವರ ಪುತ್ರ ಕ್ಯಾಪ್ಟನ್ ಅನಿತೇಜ್ ಹೇಳಿದರು.


ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಪ್ರೇರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಂಗಳವಾರ ಮಾತನಾಡಿದರು.


ಯುವ ಜನತೆ ಕೇವಲ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಕೋರ್ಸ್ ಗಳಿಗೆ ಮಾತ್ರ ಆದ್ಯತೆ ಕೊಡದೆ ಸೇನೆಗೆ ಸೇರುವತ್ತ ಒಲವು ತೋರಿಸಬೇಕೆಂದರು ಸೇನೆಗೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯೂ ಪರಿಪೂರ್ಣ ಮಾನವನಾಗಿ ಹೊರಹೊಮ್ಮುತ್ತಾನೆ. ಸೇನೆಯಲ್ಲಿ ಕೆಲಸ ನಿರ್ವಹಿಸುವುದು ಅತ್ಯಂತ ಜವಾಬ್ದಾರಿಯುತ ಮತ್ತು ಗೌರಯುತ ಕೆಲಸವಾಗಿದೆ. ಸೇನೆಯಲ್ಲಿ ಸಿಗುವ ಆನಂದ ಹೋಲಿಕೆಗೆ ನಿಲುಕದ್ದು. ಯುವಜನತೆ ಕೇವಲ ಹಣ ಸಂಪಾದನೆಯ ಉದ್ಯೋಗವನ್ನು ಹರಸಿ ಹೋಗದೆ ಸೇನೆ ಸೇರಿ ದೇಶಸೇವೆ ಗೈಯುವಂತಹ ಮಹತ್ತರ ಕಾರ್ಯವನ್ನು ಮಾಡಿ ಜೀವನವನ್ನು ಸಾರ್ಥಕಗೊಳಿಸಬೇಕು ಎಂದರು.


ಆಡಳಿತ ಮಂಡಳೀಯ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಇಂದಿನ ಮಕ್ಕಳು ದೇಶಪ್ರೇಮವನ್ನು ವಿದ್ಯಾರ್ಥಿದೆಸೆಯಲ್ಲೇ ಬೆಳೆಸಿಕೊಂಡು ನಾಡಿನ ಏಳಿಗೆಗೆ ಕಾರಣೀಭೂತರಾಗಬೇಕು. ಅಂಬಿಕಾ ಸಂಸ್ಥೆಯ ಮಕ್ಕಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ಸಾರ್ಥಕ ಬದುಕನ್ನು ಬಾಳಬೇಕೆಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಜಿಯಾದ ಶ್ರೀಮತಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಶಂಕರನಾರಾಯಣ ಭಟ್ ಸ್ವಾಗತಿಸಿದರು. ಕಾಲೇಜಿನ ಗಣಿತ ಉಪನ್ಯಾಸಕ ತಿಲೋಶ್ ಕುಮಾರ್ ಸಿ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم