ಜಲ್ಲಿಕಟ್ಟು ಪರಿಶೀಲನಾ ಸಮಿತಿ ಮುಖ್ಯಸ್ಥರಾಗಿ ಮೈಸೂರಿನ ಡಾ.ಎಸ್.ಕೆ ಮಿತ್ತಲ್ ನಿಯೋಜನೆ

Upayuktha
0

 


ಮೈಸೂರು ಮೂಲದ ಡಾ. ಶ್ರೀ ಕೃಷ್ಣ ಮಿತ್ತಲ್ ಇವರನ್ನು ಕೇಂದ್ರ ಸರ್ಕಾರದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ನವದೆಹಲಿ ರೂಪಿಸಿದ ಜಲ್ಲಿಕಟ್ಟು ಕ್ರೀಡಾ ಪರಿಶೀಲನಾ ಸಮಿತಿ 2022 ಇದರ ಮುಖ್ಯಸ್ಥರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.


ಇವರು ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಇದರ ಕಾನೂನು ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಲ್ಲಿಕಟ್ಟು ವಿವಾದ ಕೊನೆಗೊಳಿಸಲು ಸರ್ವೋಚ್ಚ ನ್ಯಾಯಾಲಯ ರೂಪಿಸಿದ ಜಲ್ಲಿಕಟ್ಟು ಪರಿಶೀಲನಾ ಸಮಿತಿಯ ಮುಖ್ಯಸ್ಥರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಗೋಸೇವಾ ಆಯೋಗದ ಸ್ಥಾಪಕ ಅಧ್ಯಕ್ಷರಾಗಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.  


ಕಳೆದ 3 ದಶಕಗಳಿಂದ ಗೋವಿನ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ  ದೇಶದಾದ್ಯಂತ ಅವಿರತ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ಇರುವ ಡಾ. ಶ್ರೀ ಕೃಷ್ಣ ಮಿತ್ತಲ್ ಅವರು ಮೈಸೂರು ಅಗರ್ವಾಲ್ ಸಾಮಾಜ ಮತ್ತು ಹೆಮೋಫೀಲಿಯಾ ರೋಗಿಗಳ ಸಹಾಯ ಸಂಸ್ಥೆ, ಮೈಸೂರು ಇದರ ಅಧ್ಯಕ್ಷರೂ ಆಗಿದ್ದಾರೆ. 


ದೇಶ ವಿದೇಶಗಳ ಪಶು ನಿಯಮ ಹಾಗೂ ಕಾನೂನುಗಳು ಕುರಿತು ಮಾಡಿದ ಅಧ್ಯಯನಾತ್ಮಕ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ದೇಶದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೂಡಾ ಶ್ರೀ ಕೃಷ್ಣ ಮಿತ್ತಲ್ ಅವರು  ಭಾಜನರಾಗಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top