ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನ

Upayuktha
0

 

ಮೇರಿಹಿಲ್‌: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುಬ್ರಹ್ಮಣ್ಯ ಘಟಕದ ಗೃಹರಕ್ಷಕರಾದ ದಿ. ಅಜೀತ್ ಯು ಇವರು ಇತ್ತೇಚೆಗೆ ಆಕಸ್ಮಿಕವಾಗಿ ಮೃತಹೊಂದಿರುತ್ತಾರೆ. ಇವರ ಕುಟುಂಬದವರಿಗೆ ಕೇಂದ್ರ ಕಛೇರಿಯಿಂದ ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನವನ್ನು ನೀಡಿರುತ್ತಾರೆ. ಈ ನಿಟ್ಟಿನಲ್ಲಿ ದಿನಾಂಕ 12-01-2022ನೇ ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ, ಮೇರಿಹಿಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಇವರು ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿ ಹರೀಶ್ಚಂದ್ರ ಇವರಿಗೆ ರೂಪಾಯಿ 10,000/- ಮೌಲ್ಯದ ಚೆಕ್ ನೀಡಿದರು.


ಈ ಸಂದರ್ಭದಲ್ಲಿ ಕಛೇರಿಯ ಉಪಸಮಾದೇಷ್ಟರಾದ ರಮೇಶ್, ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್, ಮುಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್, ಸುನೀಲ್ ಕುಮಾರ್ (ಸಾರ್ಜೆಂಟ್), ಗೃಹರಕ್ಷಕರಾದ ಸುಲೋಚನಾ, ಜಯಲಕ್ಷ್ಮಿ, ದಿವಾಕರ್, ಜಯಂತ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top