ಮಂಗಳೂರು: ಜನಪ್ರಿಯ ಶ್ರವಣ ಸಾಮಾಜಿಕ ಜಾಲತಾಣ ಕ್ಲಬ್ ಹೌಸ್‌ನ ನಮ್ಮ ಕರಾವಳಿ ಕ್ಲಬ್‌ನಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ಕಾಸರಗೋಡಿನ ಹೆಮ್ಮೆಯ ಸಾಧಕರಾಗಿರುವ ಶಿಕ್ಷಣ ತಜ್ಞ, ಹವಿ-ಸವಿ ಕೋಶದ ನಿಘಂಟು ರಚನಾಕಾರರು, ಸಾಹಿತಿ ವಿ.ಬಿ. ಕುಳಮರ್ವ ಅವರು ಭಾಗವಹಿಸಿ ತಮ್ಮ ಮನದಾಳದ ಮಾತುಗಳನ್ನು ಶ್ರೋತೃಗಳ ಜತೆ ಹಂಚಿಕೊಳ್ಳಲಿದ್ದಾರೆ.
ನಮ್ಮ ಕರಾವಳಿ / NAMMA KARAVALI ಕ್ಲಬ್ ತನ್ನ 'ಸಾಧಕರ ಜತೆ ಮಾತುಕತೆ' ಸರಣಿಯಲ್ಲಿ ಈ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.ಶುಕ್ರವಾರ ರಾತ್ರಿ 8 ಗಂಟೆಯಿಂದ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಕ್ಲಬ್ ಹೌಸ್ App ಡೌನ್ಲೋಡ್ ಮಾಡಿಕೊಂಡು ಈ ಲಿಂಕ್ ಮೂಲಕ ನಮ್ಮ ಕರಾವಳಿ ಕ್ಲಬ್ ಅನ್ನು ಸೇರಿಕೊಳ್ಳಬಹುದಾಗಿದೆ.
https://www.clubhouse.com/join/namma-karavali%E0%B2%A8%E0%B2%AE%E0%B2%AE-%E0%B2%95%E0%B2%B0%E0%B2%B5%E0%B2%B3/pjykYGBd/PN00OGzG
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ