ಪುತ್ತೂರು ಬಿಲ್ಲವ ಸಂಘದಿಂದ ನಾರಾಯಣಗುರು ಸಂದೇಶಯಾತ್ರೆ

Upayuktha
0

ಪುತ್ತೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಪ್ರದರ್ಶಿಸಲು ಅವಕಾಶ ಸಿಗದ ಹಿನ್ನಲೆಯಲ್ಲಿ ಪುತ್ತೂರು ಬಿಲ್ಲವ ಸಂಘದ ನೇತೃತ್ವದಲ್ಲಿ ಬುಧವಾರ ಪುತ್ತೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಂದೇಶ ಯಾತ್ರೆ ನಡೆಸಲಾಯಿತು.


ನಗರದ ದರ್ಬೆ ವೃತ್ತದಿಂದ ಬಪ್ಪಳಿಗೆ ಗುರುಮಂದಿರ ತನಕ ಬ್ರಹ್ಮಶ್ರೀ ನಾರಾಯಣಗುರು ಸ್ತಬ್ಧ ಚಿತ್ರದ ಮೆರವಣಿಗೆಯೊಂದಿಗೆ ಕಾಲ್ನಡಿಗೆ ಜಾಥಾ ಮಾಡಲಾಯಿತು.


ನರಿಮೊಗರು ಸಾಂದಿಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು, ಸುದಾನ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್, ನ್ಯಾಯವಾದಿ ಚಿದಾನಂದ ಬೈಲಾಡಿ, ಸಂತ ಫಿಲೋಮಿನಾ ಕಾಲೇಜಿನ ವಂ. ಆಶೋಕ್ ರಾಯನ್ ಕ್ರಾಸ್ತಾ, ವೈದ್ಯ ಡಾ.ರಘು ಬೆಳ್ಳಿಪ್ಪಾಡಿಯವರು ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದರ್ಬೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.


ಬಳಿಕ ಬಪ್ಪಳಿಗೆಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರದವರೆಗೆ ನಾರಾಯಣ ಗುರುಗಳ ಸ್ತಬ್ಧಚಿತ್ರ, ಚೆಂಡೆ, ಪಟಾಕಿ ಸಿಡಿಸುವಿಕೆಯೊಂದಿಗೆ ಮೆರವಣಿಗೆ ಸಾಗಿತು. ಗುರು ಮಂದಿರದಲ್ಲಿ ಮಹಿಳೆಯರು ಪುಷ್ಪಾರ್ಚಣೆ ಮಾಡುವ ಮೂಲಕ ಸ್ತಬ್ಧ ಚಿತ್ರವನ್ನು ಸ್ವಾಗತಿಸಿದರು.


ಕಾರ್ಯಕ್ರಮದಲ್ಲಿ ಗುರುಮಂದಿರದ ನಿಕಟಪೂರ್ವ ಕಾರ್ಯನಿರ್ವಹಣಾಧಿಕಾರಿ ಆರ್. ಸಿ. ನಾರಾಯಣ್, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮಾಜಿ ಅಧ್ಯಕ್ಷರಾದ ಜಯಂತ್ ನಡುಬೈಲು, ವಿಜಯ ಕುಮಾರ್ ಸೊರಕೆ, ಸೇಸಪ್ಪ ಬಂಗೇರ,  ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಬಾಳಪ್ಪ ಪೂಜಾರಿ, ಡಾ.ಸದಾನಂದ ಕುಂದಾರ್, ಶಶಿಧರ್ ಕಿನ್ನಿಮಜಲು, ಉಲ್ಲಾಸ್ ಕೋಟ್ಯಾನ್, ಎಸ್.ಎಂ. ಬಂಗೇರಾ, ಹೊನ್ನಪ್ಪ ಪೂಜಾರಿ ಕೈಂದಾಡಿ, ಉಷಾ ಅಂಚನ್, ವಿಶಾಲಾಕ್ಷಿ ಬನ್ನೂರು ಮತ್ತಿತರರು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top